ಪೆರ್ಲ: ಕಾಟುಕುಕ್ಕೆ ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿ ಆಶ್ರಯದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ
ಸಕಲ ರೋಗ ನಿವಾರಣಾರ್ಥವಾಗಿ ಜೂ.22ರಂದು ಬೆಳಿಗ್ಗೆ 8ರಿಂದ ಬ್ರಹ್ಮಶ್ರೀ ನೀಲೇಶ್ವರ ಉಚ್ವಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಧನ್ವಂತರಿ ಪೂಜೆ ಹಾಗೂ ಸಾಮೂಹಿಕ ಭಜನೆ ನಡೆಯಲಿದೆ.
ಬೆಳಿಗ್ಗೆ 8ಕ್ಕೆ ದೇವತಾ ಪ್ರಾರ್ಥನೆ, ಮಹಾ ಸಂಕಲ್ಪ, ಶ್ರೀ ಧನ್ವಂತರಿ ಪೂಜೆ ಆರಂಭ, ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 500ಕ್ಕೂ ಮೇಲ್ಪಟ್ಟ ಮಹಿಳಾ ಭಜನಾರ್ಥಿಗಳಿಂದ ಹರಿದಾಸ ಶ್ರೇಷ್ಠ ವಿಜಯ ವಿಠಲದಾಸರಿಂದ ರಚಿತವಾದ ಪಂಚರತ್ನ ಕೃತಿಗಳಲ್ಲಿ ಒಂದಾದ 'ಶ್ರೀ ಧನ್ವಂತರಿ ಸುಳಾದಿ' ತರಬೇತಿಗೆ ಚಾಲನೆ ಹಾಗೂ ಸುಳಾದಿ ಗಾಯನದ ಸಮರ್ಪಣೆ, ದೇವಳದಲ್ಲಿ ನಿರ್ಮಾಣಗೊಳ್ಳುತ್ತಿರುವ ಭೋಜನ ಶಾಲೆ-ಪಾಕ ಶಾಲೆಗೆ ನಿಧಿ ಸಮರ್ಪಣೆ, 11ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
11.30ಕ್ಕೆ ಆರಂಭವಾಗುವ ಧಾರ್ಮಿಕ ಸಭೆಯಲ್ಲಿ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ಧನ್ವಂತರಿ ಪೂಜೆಯ ಮಹತ್ವ ವಿವರಿಸುವರು. ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣನ್ ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ, ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ವ್ಯವಸ್ಥಾಪಕ ಮಿತ್ತೂರು ಪುರುಷೋತ್ತಮ ಭಟ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೇಂದ್ರ ನಿರ್ದೇಶಕ, ಭಜನಾ ಪರಿಷತ್ತು ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ ಶಿಶಿಲ, ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನ ಎಂ, ಹವ್ಯಕ ಮಹಿಳಾ ಮಂಡಳಿ ಅಧ್ಯಕ್ಷೆ ಈಶ್ವರಿ ಎಸ್.ಭಟ್ ಬೇರ್ಕಡವು, ಕಲಾರತ್ನ ಶಂನಾಡಿಗ ಕುಂಬಳೆ, ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್.ಶಿವರಾಮ ಭಟ್ ಕಾರಿಂಜ-ಹಳೆಮನೆ, ಅನಂತರಾಮ ಭಟ್ ಮುಜೂರು, ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಕಿರಣ್ ಕುಮಾರ್ ರೈ ಬಲ್ನಾಡು, ಕಣಿಪುರ ಯಕ್ಷಗಾನ ಮಾಸ ಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್, ರಾಮಪ್ರಸಾದ್ ಕಾಸರಗೋಡು, ಹಾರಾಡಿ ವನಿತಾ ಸಮಾಜ ಅಧ್ಯಕ್ಷೆ ಪ್ರೇಮಲತಾ ರಾವ್ ಬೊಳುವಾರು, ಸುಬ್ರಹ್ಮಣ್ಯೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿಶ್ರೀ ಜಿ.ಶೆಟ್ಟಿ ಉಪಸ್ಥಿತರಿರುವರು. ಮಧ್ಯಾಹ್ನ 1.30ರಿಂದ 'ಶ್ರೀರಾಮ ಪರಂಧಾಮ' ಯಕ್ಷಗಾನ ತಾಳಮದ್ದಳೆ ನಡೆಯಲಿದೆ.