ಕಾಸರಗೋಡು: ಕಾಸರಗೋಡು ಜಿಲ್ಲಾ ಬಿಲ್ಲವ ಸೇವಾ ಸಂಘದ ಆಶ್ರಯದಲ್ಲಿ ಜೂನ್ 23 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಪಿಲಿಕುಂಜೆ ನಗರ ಸಭೆ ಕಾನ್ಪರೆನ್ಸ್ ಹಾಲ್‍ನಲ್ಲಿ ಬಿಲ್ಲವ ಸಮಾಜದ ಸಾಧಕರಿಗೆ ಸಮ್ಮಾನ, ರ್ಯಾಂಕ್ ವಿಜೇತ ಹಾಗು ಪ್ಲಸ್ ಟು ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್‍ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಜರಗಲಿದೆ.
ಬೆಳಿಗ್ಗೆ 10 ಗಂಟೆಗೆ ಜರಗುವ ಕಾರ್ಯಕ್ರಮವನ್ನು ಬಿಲ್ಲವ ಸಮಾಜದ ದೈವಸ್ಥಾನಗಳ ಮುಖ್ಯಸ್ಥರು ಹಾಗು ಗಣ್ಯರ ಸಮ್ಮುಖದಲ್ಲಿ ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಲಾಗುವುದು. ಬಿಲ್ಲವ ಸಮಾಜದ ಹತ್ತು ಮಂದಿ ಹಿರಿಯ ಸಾಧಕರಿಗೆ ಸಮ್ಮಾನಿಸಲಾಗುವುದು. ರ್ಯಾಂಕ್ ವಿಜೇತ ವಿದ್ಯಾರ್ಥಿಗಳಾದ ಡಾ.ಧನ್ಯಶ್ರೀ ಕೆ.ಬಿ, ಸುಶ್ಮಿತ ಕುಂಬಳೆ, ರೋಹಿತ್ ಕುಮಾರ್, ವಿಶಾಲಾಕ್ಷಿ ಬಿ.ಕೆ, ರಕ್ಷಿತ ಕೆ. ಮತ್ತು 10 ಮಂದಿ ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಗುವುದು. ಇದರೊಂದಿಗೆ ಬಿರುವೆರ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಸಂಘಾಟಕರಿಗೆ ಗೌರವಿಸಲಾಗುವುದು.
ವಿಶೇಷ ಆಕರ್ಷಣೆ : ಬಹುಭಾಷಾ ಚಲನ ಚಿತ್ರ ನಟ, ತುಳುನಾಡ ರತ್ನ, ಕಿರುತೆರೆಯ ಖ್ಯಾತ ನಟ, ಹತ್ತಾರು ತುಳು ಸಿನೇಮಾಗಳ ನಾಯಕ ನಟ ಮತ್ತು ಪ್ರಮುಖ ಪಾತ್ರಗಳಲ್ಲಿ ಮಿಂಚಿದ ಗಡಿನಾಡ ಕಲಾವಿದ ಪೃಥ್ವಿ ಅಂಬಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.