ಕಾಸರಗೋಡು: ಕೃಷಿ ಅಭಿವೃದ್ಧಿ ಕೃಷಿ ಕಲ್ಯಾಣ ಇಲಾಖೆಯ ಸಮಗ್ರ ತರಕಾರಿ ಅಭಿವೃದ್ಧಿ ಯೋಜನೆಯ ಪ್ರಕಾರ ಹಂತಗಳಲ್ಲಿ ಜಿಲ್ಲೆಗೆ 2.5 ಕೋಟಿ ರೂ. ಮಂಜೂರು ಮಾಡಲಾಗಿದೆ.
"ಒಣತ್ತಿನ್ ಒರು ಮುರ ಪಚ್ಚಕ್ಕರಿ(ಓಣಂ ಹಬ್ಬಕ್ಕೆ ಒಂದಷ್ಟು ಜೈವಿಕ ತರಕಾರಿ)" ಎಂಬ ಯೋಜನೆ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಓನಂ ಹಬ್ಬಕ್ಕಾಗಿ ವಿಷರಹಿತ ತರಕಾರಿ ಬೆಳೆಯುವ ಉದ್ದೇಶದಿಂದ ಹಿತ್ತಿಲ್ಲೇ ನೆಟ್ಟು ಬೆಳೆಸುವ ಈ ಯೋಜನೆಗಾಗಿ 2,35,000 ತರಕಾರಿ ಬೀಜಗಳನ್ನು ಶಾಲೆಯ ಮಕ್ಕಳಿಗೆ,ಕೃಷಿಕರಿಗೆ ಮತ್ತು ಸ್ವಯಂಸೇವಾ ಸಂಘಟನೆಗಳಿಗೆ ಜಿಲ್ಲೆಯಲ್ಲಿ ವಿತರಿಸಲಾಗಿದೆ. ಇದಲ್ಲದೆ 7 ಲಕ್ಷ ತರಕಾರಿ ಸಸಿಗಳನ್ನು ಜಿಲ್ಲೆಯಲ್ಲಿ ಉಚಿತವಾಗಿ ವಿತರಣೆ ನಡೆಸಲಾಗಿದೆ. ವಾಣಿಜ್ಯೀಕರಣದ ಹಿನ್ನೆಲೆಯಲ್ಲಿತರಕಾರಿ ಬೆಳೆಯನ್ನುಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಲಾ 5 ಹೆಕ್ಟೇರ್ ಕ್ಲಸ್ಟರ್ಗಳನ್ನು
ಕೃಷಿಭವನ ಮಟ್ಟದಲ್ಲಿ ರಚಿಸಲಾಗಿದೆ. ಕ್ಲಸ್ಟರ್ ಒಂದಕ್ಕೆ 75 ಸಾವಿರ ರೂ. ಆರ್ಥಿಕ ಸಹಾಯ ಒದಗಿಸಲಗುವುದು. ಜಿಲ್ಲೆಯಲ್ಲಿ ಈ ವರ್ಷ ಇಂಥಾ 75 ಕ್ಲಸ್ಟರ್ ಗಳಿಗೆ ಆರ್ಥಿಕಸಹಾಯ ಲಭಿಸಲಿದೆ.
ಬಂಜರು ಭೂಮಿಯಲ್ಲಿ ತರಕಾರಿಕೃಷಿ ನಡೆಸುವ ನಿಟ್ಟಿನಲ್ಲಿ ಹೆಕ್ಟೇರ್ಗೆ 30 ಸಾವಿರ ರೂ. ಆರ್ಥಿಕಸಹಾಯ ನೀಡಲಾಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ 70 ಹೆಕ್ಟೇರ್ ಬಂಜರು ಭೂಮಿಯಲ್ಲಿ ಕೃಷಿ ನಡೆಸಲುಸಹಾಯ ನೀಡಲಾಗುವುದು. ಜಿಲ್ಲೆಯಲ್ಲಿ 25 ಸೆಂಟ್ಸ್ ಗಿಂತ ಕಡಿಮೆಯಲ್ಲದ ಜಾಗದಲ್ಲಿ ತರಕಾರಿ ಬೆಳೆಯುವ ಎಲ್ಲ ಕೃಷಿಕರಿಗೆ ಹೆಕ್ಟೇರ್ ಗೆ 15 ಸಾವಿರ ರೂ. ಆರ್ಥಿಕ ಸಹಾಯ ನೀಡಲಾಗುವುದು. 283 ಹೆಕ್ಟೇರ್ ಗೆ 42.45 ಲಕ್ಷ ರೂ. ಈ ಘಟಕಕ್ಕೆ ಜಿಲ್ಲೆಗಾಗಿ ಮಂಜೂರುಮಾಡಲಾಗಿದೆ.
ಬೇಸಗೆ ಮತ್ತುಮಳೆಗಾಲದಲ್ಲಿ ಬೆಳೆ ಸಂರಕ್ಷಣೆ ನಡೆಸುವ ನಿಟ್ಟಿನಲ್ಲಿ ರಚಿಸಲಾದ ರೀತಿಯಾಗಿರುವ ಮಳೆಮರ ಕೃಷಿ ಮೂಲಕವರ್ಷವಿಡೀ ತರಕಾರಿ ಕೃಷಿ ಸಾಧ್ಯವಾಗಿದ್ದು, ಉತ್ಪಾದನೆ ಹೆಚ್ಚಳವೂ ಸಾಧ್ಯವಾಗಲಿದೆ. 100 ಸ್ಕ್ವೇರ್ ಮೀಟರ್ ವಿಸ್ತೀರ್ಣದ ಮಳೆಮರಕ್ಕೆ ಗರಿಷ್ಠ 50 ಸಾವಿರ ರೂ.ನ ಸಹಾಯ ದೊರೆಯಲಿದೆ. ಜಿಲ್ಲೆಯಲ್ಲಿ ಈ ವರ್ಷ ಇಂಥಾ 35 ಮಳೆಮರ ಯೂನಿಟ್ ಗಳಿಗೆ ಸಬ್ಸಿಡಿ ದೊರೆತಿದೆ.
ತರಕಾರಿ ಕೃಷಿಗೆ ಪ್ರೋತ್ಸಾಹ ನಿಡುವ ನಿಟ್ಟಿನಲ್ಲಿ ಕನಿಷ್ಠ ವೆಚ್ಚದಲ್ಲಿ , ಅತ್ಯುತ್ತಮ ನೀರಾವರಿ ಒದಗಿಸುವನಿಟ್ಟಿನಲ್ಲಿ ಕಳೆದ ಆರ್ಥಿಕ ವರ್ಷ ಆರಂಭಿಸಲಾದ ಫ್ಯಾಮಿಲಿಡ್ರಿಪ್ ಇರಿಗೇಷನ್ಸಿಸ್ಟಂ ಈ ವರ್ಷವೂ ಮುಂದುವರಿಸಲಾಗುವುದು. ಇಂಥಾ ಕಿರು ನೀರಾವರಿ ಯೂನಿಟ್ ಗಳಿಗೆ 7,500 ರೂ.ನಂತೆ ಸಬ್ಸಿಡಿ ಮಂಜೂರು ಮಾಡಲಾಗುವುದು. ಜಿಲ್ಲೆಯಲ್ಲಿ ಇಂಥಾ 16 ಯೂನಿಟ್ ಗಳನ್ನು ಸ್ಥಾಪಿಸಲಾಗುವುದು.
ಬಹುವರ್ಷ ಪರಂಪರಾಗತ ತರಗತಿ ಕೃಷಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನುಗ್ಗೆಕಾಯಿ,ಕರಿಬೇವು, ಪ್ಪಾಯ ಇತ್ಯಾದಿ ಸಸಿಗಳು ಸೇರಿರುವ 100 ರೂ. ಬೆಲೆಯಿರುವ 2 ಸಾವಿರ ಕಿಟ್ ಗಳನ್ನು ಶೇ 50 ಸಬ್ಸಿಡಿ ಸಹಿತ ವಿತರಣೆ ನಡೆಸಲಾಗುವುದು. ಜೊತೆಗೆ ಪರಂಪರಾಗತ ತರಕಾರಿ ಬೀಜಗಳನ್ನು ಉತ್ಪಾದಿಸಿ ವಿತರಣೆ ನಡೆಸುವ ನಿಟ್ಟಿನಲ್ಲಿ ಹೆಕ್ಟೇರ್ ಗೆ 25 ಸಾವಿರರೂ. ಸಬ್ಸಿಡಿ ಮಂಜೂರು ಮಾಡಲಾಗಿದೆ. 5 ಹೆಕ್ಟೇರ್ ಜಾಗದಲ್ಲಿ ಈ ವರ್ಷ ಈ ಯೋಜನೆ ಜಾರಿಗೊಳ್ಳಲಿದೆ.
ತರಕಾರಿಗಳು ಹಾನಿಯಾಗದಂತೆ ಸುಕ್ಷಿತವಾಗಿಇರಿಸುವ ವಿಧಾನವೇ ಕೂಲ್ ಛೇಂಬರ್. ಹೊರಗಡೆಯ ತಾಪನೆಲೆಗಿಂತ 10-15 ಡಿಗ್ರಿ ಸೆಲ್ಶಿಯಸ್ ಕಡಿಮೆ ತಾಪನೆಲೆ ಉಳಿಸಿಕೊಂಡು ಇದು ಒಂದು ವಾರದ ವರೆಗೂ ತರಕಾರಿ ಹಾಳಾಗದಂತೆ ಇರಿಸುತ್ತದೆ. ಇಂಥಾ 38 ಯೂನಿಟ್ ಗಳನ್ನು ನಿರಿಸಲು ಉದ್ದೇಶಿಸಲಾಗಿದೆ.
ಆಯಾ ಪಂಚಾಯತ್ ಗಳು ತಮಗೆ ಬೇಕಾದ ತರಕಾರಿ ಸಸಿಗಳನ್ನು ತಮ್ಮಲ್ಲೇ ಉತ್ಪಾದಿಸುವ ಕಿರು ತರಕಾರಿ ನರ್ಸರಿಗಳ ಸ್ಥಾಪನೆಗಾಗಿ 1.25 ಲಕ್ಷರೂ.ಮಂಜೂರು ಮಾಡಲಾಗುದೆ. 50 ಸ್ಕ್ವೇರ್ ಮೀಟರ್ ಯೂನಿಟ್ ಗೆ 70 ಸಾವಿರ ರೂ. ಸಬ್ಸಿಡಿ ಮಂಜೂರು ಮಾಡಲಾಗಿದೆ. ಶಾಲೆಗಳ ಸಹಿತ ಕಡೆಗಳಲ್ಲಿ 10 ಸೆಂಟ್ಸ್ ಗಿಂತ ಕಡಿಮೆಯಲ್ಲದ ಜಾಗದಲ್ಲಿ ತರಕಾರಿ ಕೃಷಿ ನಡೆಸಲು 5 ಸಾವಿರರೂ. ಮಂಜೂರುಮಾಡಲಾಗುವುದು. ಜಿಲ್ಲೆಯಲ್ಲಿ100 ಸಂಸ್ಥೆಗಳಿಗೆ ಈ ರೀತಿ ಆರ್ಥಿಕ ಸಹಾಯ ವಿತರಣೆ ಮಾಡಲಾಗುವುದು. ಇದಲ್ಲದೆ ಸರಕಾರಿ, ಖಾಸಗಿ ಸಂಸ್ಥೇಗಳ 25 ಸೆಂಟ್ಸ್ ಗಿಂತ ಕಡಿಮೆಯಲ್ಲದ ತರಕಾರಿ ಕೃಷಿ ನಡೆಸಲು ಮೂಲಭೂತ ಸೌಲಭ್ಯ ಏರ್ಪಡಿಸುವ ನಿಟ್ಟಿನಲ್ಲಿ ಒಂದುಲಕ್ಷ ರೂ. ವರೆಗೆ ಆರ್ಥಿಕ ಸಹಾಯ ನೀಡಲಾಗುವುದು. ಜಿಲ್ಲೆಗೆ ಈ ಘಟಕಕ್ಕೆ 8 ಲಕ್ಷ ರೂ. ಮಂಜೂರು ಮಾಡಲಾಗಿದೆ.
ವಾಣಿಜ್ಯ ಸಂಸ್ಥೆಗಳಲ್ಲಿ ತರಕಾರಿ ಕೃಷಿ ನಡೆಸುವ ಕೃಷಿಕರಿಗೆ ನೀರಾವರಿ ಸೌಲಭ್ಯಕ್ಕಾಗಿ ಪಂಪ್ ಸೆಟ್ ಖರಿದಿಗೆ ಶೇ 50 ಸಬ್ಸಿಡಿ ಸಹಿತ ಗರಿಷ್ಠ 10 ಸಾವಿರ ರೂ. ಮಂಜೂರು ಮಾಡಲಾಗುವುದು. ಜಿಲ್ಲೆಯಲ್ಲಿ 125 ಪಂಪ್ ಸೆಟ್ ಖರೀದಿಗೆ ಈ ರೀತಿಯ ಸಬ್ಸಿಡಿ ನೀಡಲಾಗುವುದು.
ರೋಗಬಾಧೆಯಿದ್ದಲ್ಲಿ ಜೈವಿಕ ಕೀನಾಶ ಸಿಂಪಡಣೆ ನಡೆಸುವ ನಿಟ್ಟಿನಲ್ಲಿ 160 ಸ್ಪ್ರೇಯರ್ ಗಳಿಗೆ 1500 ರೂ. ಸಬ್ಸಿಡಿ ರೂಪದಲ್ಲಿ ವಿತರನೆ ನಡೆಸಲಾಗುವುದು. ನೂತನ ತಾಂತ್ರಿಕ ವಿದ್ಯೆ ಕೃಷಿ ತಾಣಗಳಲ್ಲಿ ಬಳಸುವ ನಿಟ್ಟಿನಲ್ಲಿ ಪ್ರೋಜೆಕ್ಟ್ ಹಿನ್ನೆಲೆಯಲ್ಲಿ 3 ಲಕ್ಷ ರೂ. ವರೆಗೆ ಮಂಜೂರು ಮಾಡಲಾಗುವುದು.
ವಾಣಿಜ್ಯ ತಳಹದಿಯಲ್ಲಿ ತರಕಾರಿ ಕೃಷಿನಡೆಸುವ ಕೃಷಿಕನಿಗೆ ಡ್ರಿಪ್ಸ್ ನೀರಾವರಿ ಏರ್ಪಡಿಸುವ ನಿಟ್ಟಿನಲ್ಲಿ 12 ಲಕ್ಷ ರೂ.ಮಂಜೂರು ಮಾಡಲಾಗಿದೆ. 50ಸೆಂಟ್ಸ್ ನ ಒಂದು ಯೂನಿಟ್ ಗೆ 30 ಸಾವಿರ ರೂ. ಸಬ್ಸಿಡಿ ಮಂಜುರು ಮಾಡಲಾಗುವುದು. ಒಟ್ಟಿನಲ್ಲಿ ತರಕಾರಿ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ವಾವಲಂಬಿತನಕ್ಕೆ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಕೃಷಿ ಇಲಾಖೆ ಈ ವರ್ಷ ಜಿಲ್ಲೆಯಲ್ಲಿ ಜಾರಿಗೊಳಿಸಿದೆ.