ಕಾಸರಗೋಡು: ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆ ವಿಭಾಗ ಸರಕಾರಿ ಕಾಲೇಜು ಕಾಸರಗೋಡು ಸಹಕಾರದೊಂದಿಗೆ "ಓದುವಿಕೆಯ ಮಹತ್ವ" ಎಂಬ ವಿಷಯದಲ್ಲಿ ಕನ್ನಡ ವಿಶೇಷ ಉಪನ್ಯಾಸ ಕಾರ್ಯಕ್ರಮ ಜೂ.25ರಂದು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗ ಸಭಾಂಗಣದಲ್ಲಿ ನಡೆಯಲಿದೆ.
ಕೇರಳ ತುಳು ಅಕಾಡೆಮಿ ಅಧ್ಯಕ್ಷ , ಹಿರಿಯ ರಂಗಕರ್ಮಿ ಉಮೇಶ್ ಎಂ.ಸಾಲ್ಯಾನ್ ಸಮಾರಂಭ ಉದ್ಘಾಟಿಸುವರು. ಹಿರಿಯ ಕವಿ, ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಉಪನ್ಯಾಸ ನಡೆಸುವರು. ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್ ಎಂ., ಜಿಲ್ಲಾ ಕನ್ನಡ ಮಾಹಿತಿ ಸಹಾಯಕ ವೀಜಿ ಕಾಸರಗೋಡು ಉಪಸ್ಥಿತರಿರುವರು. ಕಾಲೇಜು ಪ್ರಾಂಶುಪಾಲ ಡಾ. ಅರವಿಂದ ಕೃಷ್ಣನ್ ಅಧ್ಯಕ್ಷತೆ ವಹಿಸುವರು. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತಾ ಎಸ್. ಸ್ವಾಗತಿಸುವರು. ಕಾಲೇಜಿನ ಯಕ್ಷಗಾನ ಸಂಶೋಧನೆ ಕೇಂದ್ರದ ಸಂಚಾಲಕ ಡಾ.ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರೂಪಿಸುವರು.