ಕಾಸರಗೋಡು : ಲೋಕಸಂಘರ್ಷ ಸಮಿತಿ ವತಿಯಿಂದ ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟ ನಡೆಸಿದ 44 ನೇ ವರ್ಷದಂಗವಾಗಿ ಪ್ರಜಾಪ್ರಭುತ್ವ ಸಂರಕ್ಷಾಣಾ ದಿನಾಚರಣೆಯನ್ನು ಜೂ .25 ರಂದು ಕಾಸರಗೋಡು ಜಿಲ್ಲಾ ತುರ್ತು ಪರಿಸ್ಥಿತಿ ಹೋರಾಟ ಸಮಿತಿ ವತಿಯಿಂದ ಆಚರಿಸಲಾಗುವುದು.
ಕಾಸರಗೋಡು ಟೌನ್ ಬ್ಯಾಂಕ್ ಪ್ರಧಾನ ಕಚೇರಿ ಸಭಾ ಭವನದಲ್ಲಿ ಬೆಳಿಗ್ಗೆ 10 ರಿಂದ ಜರಗಲಿರುವ ಕಾರ್ಯಕ್ರಮದಲ್ಲಿ ಬಿ.ಜೆ.ಪಿ.ಹಿರಿಯ ನಾಯಕ ಪಿ.ಪಿ.ಕರುಣಾಕರನ್ ಮಾಸ್ತರ್ ಕಣ್ಣೂರು ಮತ್ತು ಸಂಘ ಪರಿವಾರದ ನಾಯಕರು ಭಾಗವಹಿಸಲಿರುವರು.ಸಂಘಟನೆಯ ಜಿಲ್ಲಾಧ್ಯಕ್ಷ ವಿ.ರವೀಂದ್ರನ್ ಅಧ್ಯಕ್ಷತೆ ವಹಿಸಲಿರುವರು.
ಸಮಾವೇಶದಲ್ಲಿ ಸಂಘದ ಸದಸ್ಯತನಕ್ಕೆ ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಸರ್ಟಿಫಿಕೇಟನ್ನು ವಿತರಿಸಲಾಗುವುದು.ಅಲ್ಲದೆ ಸದಸ್ಯತನಕ್ಕೆ ಉಳಿದವರ ಅರ್ಜಿಗಳನ್ನು ಸ್ವೀಕರಿಸಲಾಗುವುದು.ಆದುದರಿಂದ ಹಿಂದೆ ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟ ನಡೆಸಿದವರು, ಭೂಗತ ಚಟುವಟಿಕೆಯಲ್ಲಿ ಭಾಗವಹಿಸದವರು ಮತ್ತು ಇವರ ಮನೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬುದಾಗಿ ಜಿಲ್ಲಾ ತುರ್ತು ಪರಿಸ್ಥಿತಿ ಹೋರಾಟ ಸಮಿತಿಯ ಕಾರ್ಯದರ್ಶಿ ಅಚ್ಯುತ ಚೇವಾರ್ ವಿನಂತಿಸಿರುವರು.