ಕಾಸರಗೋಡು: ಕಾಸರಗೋಡು ನಗರದ ಟ್ರಾಫಿಕ್ ಅವ್ಯವಸ್ಥೆಗೆ ಪರಿಹಾರ ಕಲ್ಪಿಸಬೇಕು, ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರ, ಜನರಲ್ ಆಸ್ಪತ್ರೆ ರಸ್ತೆ, ಕೋಟೆಕಣಿ ರಸ್ತೆ, ಕೆ.ಪಿ.ರಾವ್ ರಸ್ತೆ ಮುಂತಾದವುಗಳಿಗೆ ಡಾಮರೀಕರಣ ನಡೆಸಿ ಸಾರಿಗೆ ಸುಗಮಗೊಳಿಸಬೇಕು, ನಗರದ ದಾರಿ ದೀಪಗಳನ್ನು ದುರಸ್ತಿ ಮಾಡಬೇಕು, ನಗರದ ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಲಾಗಿರುವ ಸಿಸಿ ಟಿವಿ ಕ್ಯಾಮರಾಗಳು ಕಾರ್ಯಾಚರಿಸುವಂತೆ ಮಾಡಬೇಕು, ಕಾಲುದಾರಿಗಳ ದುರಸ್ತಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾಸರಗೋಡು ಜಿಲ್ಲಾ ಆಟೋರಿಕ್ಷಾ ಮಜ್ದೂರ್ ಸಂಘ (ಬಿಎಂಎಸ್)ದ ಕಾಸರಗೋಡು ನಗರ ಸಮಿತಿಯ ನೇತೃತ್ವದಲ್ಲಿ ಜೂ.29ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ನಗರಸಭಾ ಕಚೇರಿಗೆ ಪ್ರತಿಭಟನಾ ಮಾರ್ಚ್ ಮತ್ತು ಧರಣಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಆಟೋರಿಕ್ಷಾ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕಾಸರಗೋಡು ಜಿಲ್ಲಾ ಆಟೋರಿಕ್ಷಾ ಮಜ್ದೂರ್ ಸಂಘದ ನಗರ ಸಮಿತಿ ಸಮ್ಮೇಳನವು ಒತ್ತಾಯಿಸಿದೆ.
ಸಮಾವೇಶವನ್ನು ಬಿಎಂಎಸ್ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎ.ಶ್ರೀನಿವಾಸನ್ ಉದ್ಘಾಟಿಸಿದರು. ಆಟೋರಿಕ್ಷಾ ಮಜ್ದೂರ್ ಸಂಘದ ವಲಯ ಅಧ್ಯಕ್ಷ ಕೆ.ಉಮೇಶ್ ಉದ್ಘಾಟಿಸಿದರು. ಅನಿಲ್ ಬಿ.ನಾಯರ್, ವಿಶ್ವನಾಥ ಶೆಟ್ಟಿ, ರಿಜೇಶ್ ಉಪಸ್ಥಿತರಿದ್ದರು.
ಈ ಸಂದರ್ಭ ಆಟೋರಿಕ್ಷಾ ಮಜ್ದೂರ್ ಸಂಘದ ಕಾಸರಗೋಡು ನಗರ ಸಮಿತಿಯ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಸುಂದರ ಪೂಜಾರಿ, ಉಪಾಧ್ಯಕ್ಷರಾಗಿ ಅರವಿಂದ್, ದಾಸ್, ಕಾರ್ಯದರ್ಶಿಯಾಗಿ ಮೋಹನ್‍ದಾಸ್, ಜೊತೆ ಕಾರ್ಯದರ್ಶಿಗಳಾಗಿ ಪ್ರಸಾದ್, ಸತೀಶ್, ಕೋಶಾ„ಕಾರಿಯಾಗಿ ಶಶಿ ಬೇಳ ಆಯ್ಕೆಗೊಂಡರು.