ಕುಂಬಳೆ: ಪ್ರೌಢಶಾಲೆ ಹಾಗೂ ಹೈಯರ್ ಸೆಕೆಂಡರಿ ವಿಲೀನೀಕರಣ ನಡೆದ ಹಿನ್ನಲೆಯಲ್ಲಿ ರಾಜ್ಯದ ಸರಕಾರ, ಅನುದಾನಿತ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ 3 ಸಾವಿರದಷ್ಟು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹುದ್ದೆಗಳು ಪ್ರಸ್ತುತ ವರ್ಷವೂ ಸೃಷ್ಟಿಯಾಗಲಿವೆ.
ಇದರಲ್ಲಿ ಹೈಯರ್ ಸೆಕೆಂಡರಿ ಅಧ್ಯಾಪಕರ 2 ಸಾವಿರದಷ್ಟು ಹುದ್ದೆಗಳು ರಾಜ್ಯದಲ್ಲಿ ಪ್ರಸ್ತುತ ವರ್ಷ ಸೃಷ್ಟಿಯಾಗಲಿವೆ. ಕ್ಲರ್ಕ್, ಪ್ಯೂನ್, ಸ್ವೀಪರ್ ಹುದ್ದೆಗಳಲ್ಲಿ ಸಾವಿರದಷ್ಟು ಹುದ್ದೆಗಳು ಸೃಷ್ಟಿಯಾಗಲಿವೆ. 836 ಅನುದಾನಿತ ಶಾಲೆಗಳು, 829 ಸರಕಾರಿ ಶಾಲೆಗಳ ಸಹಿತ ರಾಜ್ಯದಲ್ಲಿ 1, 665 ಹೆ?ಯರ್ ಸೆಕೆಂಡರಿ ಶಾಲೆಗಳಿವೆ. ನೂತನ ಹುದ್ದೆಗಳಲ್ಲಿ ಅರ್ಧದಷ್ಟು ಪ್ರಸ್ತುತ ಶೈಕ್ಷಣಿಕ ವರ್ಷ ನೇಮಕಾತಿ ನಡೆಸಲು ಅನುದಾನಿತ ಶಾಲಾ ವ್ಯವಸ್ಥಾಪಕ ಮಂಡಳಿಗಳಿಗೆ ಅವಕಾಶ ನೀಡಲಾಗುವುದು.
ಪ್ರಾಯೋಗಿಕ ಸಮಸ್ಯೆಗಳನ್ನು ಪರಿಗಣಿಸಿ ಹೈಯರ್ ಸೆಕೆಂಡರಿ ಅಧ್ಯಾಪಕ ಹುದ್ದೆಗಳಲ್ಲಿ ಈ ವರ್ಷ ಅತಿಥಿ ಅಧ್ಯಾಪಕರನ್ನು ನೇಮಿಸಲು ಸರಕಾರ ನಿರ್ದೇಶಿಸಿದೆ. ಆದರೆ, ಬೋಧಕೇತರ ಹುದ್ದೆ ನೇಮಕಾತಿಗಳಿಗೆ ಈ ವರ್ಷ ನೇಮಕಾತಿ ನಡೆಯುವುದಿಲ್ಲ.
ಶಾಲಾ ಮುಖ್ಯಸ್ಥರಾದ ಹೈಯರ್ ಸೆಕೆಂಡರಿ ಪ್ರಾಂಶುಪಾಲರ ಅಧ್ಯಾಪನ ಸಮಯ ನೂತನ ವ್ಯವಸ್ಥೆಯಲ್ಲಿ ಕಡಿತಗೊಳಿಸಲಾಗುವುದು. ಹೈಯರ್ ಸೆಕೆಂಡರಿ ಮಟ್ಟದಲ್ಲಿ ಪ್ರಸ್ತುತ ಕ್ಲರ್ಕ್, ಪ್ಯೂನ್, ಲೈಬ್ರೆರಿಯನ್, ಸ್ವೀಪರ್ ಹುದ್ದೆಗಳಿಲ್ಲ. ಹೈಯರ್ ಸೆಕೆಂಡರಿ ವಿಭಾಗ ಕೂಡ ಪ್ರೌಢಶಾಲೆಯ ಭಾಗವಾಗುವುದರೊಂದಿಗೆ ಒಟ್ಟು ಮಕ್ಕಳ ಸಂಖ್ಯೆಯನ್ನು ಪರಿಗಣಿಸಿ ನೂತನ ಬೋಧಕೇತರ ಹುದ್ದೆ ನಿರ್ಣಯವಾಗಲಿದೆ.
ಜೂ.6ರಂದು ಶಾಲೆಗಳು ಪುನರಾರಂಭಗೊಂಡಿದ್ದು, 6ನೇ ಅಧ್ಯಯನ ದಿನದಲ್ಲಿ ಮಕ್ಕಳ ಸಂಖ್ಯೆ, ಅದರ ಆಧಾರದಲ್ಲಿ ಜೂ.10ರ ಮುಂಚಿತವಾಗಿ ಬೋಧಕ-ಬೋಧಕೇತರ ಹುದ್ದೆಗಳ ನಿರ್ಣಯ ನಡೆಯಲಿದೆ. ಅದರಿಂದ, ಈ ವರ್ಷ ಬೇಕಾಗಿರುವ ನೂತನ ನೇಮಕಾತಿಗಳ ಪಟ್ಟಿ ಪ್ರಕಟಿಸಲಾಗುವುದು. ಪ್ರೌಢಶಾಲೆಯೊಂದಿಗೆ ವಿಲೀನಗೊಳಿಸುವ ಹೈಯರ್‍ಸೆಕೆಂಡರಿ ಶಾಲೆಯ ಒಟ್ಟು ಆಡಳಿತದ ಹಾಗೂ ಹೆ?ಯರ್ ಸೆಕೆಂಡರಿ ಅಕಾಡೆಮಿಕ್ ಮಟ್ಟದ ಹೊಣೆಗಾರಿಕೆ ಹೈಯರ್ ಸೆಕೆಂಡರಿ ಪ್ರಾಂಶುಪಾಲರಾಗಿದ್ದಾರೆ.
ಪ್ರಸ್ತುತ ಹೈಯರ್ ಸೆಕೆಂಡರಿ ಪ್ರಾಂಶುಪಾಲ ಒಂದು ವಾರದಲ್ಲಿ 16 ಗಂಟೆ ಅಧ್ಯಾಪನ ನಡೆಸಬೇಕಿದೆ. ಇದನ್ನು 6 ಗಂಟೆಗಳಿಗೆ ಇಳಿಸಲಾಗುವುದು ಎಂದು ಖಾದರ್ ಸಮಿತಿ ವರದಿಯ ಶಿಫಾರಸು. ಉಳಿದ 10 ಗಂಟೆ ತರಗತಿ ನಡೆಸಲು ನೂತನ ಅಧ್ಯಾಪಕರನ್ನು ನೇಮಿಸಲಾಗುವುದು. ಉಳಿದ 10 ಗಂಟೆಗಳ ಕಾಲ ತರಗತಿ ನಡೆಸಲು ನೂತನ ಅಧ್ಯಾಪಕನನ್ನು ನೇಮಿಸಬೇಕಾಗಲಿದೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವ ಶಾಲೆಗಳಲ್ಲಿ ಅದಕ್ಕೆ ಅನುಸಾರವಾಗಿ ನೂತನ ಹುದ್ದೆಗಳ ಸಂಖ್ಯೆ ಹೆಚ್ಚಲಿದೆ.