ಕಾಸರಗೋಡು: ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಕಟ್ಟಡ ನಿರ್ಮಾಣ ಮಂಜೂರಾತಿಗಿರುವ ಅರ್ಜಿಗಳಲ್ಲಿ ತೀರ್ಪಿಗೆ ಬಾಕಿಯಿರುವವನ್ನು ಜು.4ರ ಮುಂಚಿತವಾಗಿ ತೀರ್ಪು ನಿಡುವಂತೆ ಜಿಲ್ಲಾಧಿಕಾರಿಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಈ ಸಂಬಂಧ ಶುಕ್ರವಾರ ನಡೆದ ಪ್ರತ್ಯೇಕ ಅವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ನೋ ಓಬ್ಜೆಕ್ಷನ್ ಸರ್ಟಿಫಿಕೆಟ್ ಹಾಜರುಪಡಿಸದ ಕಾರಣದಿಂದ ತೀರ್ಪಿಗೆ ಬಾಕಿಯಿರುವ ಅರ್ಜಿಗಳಿಗೆ ಸಂಬಂಧಿಸಿ ಪರವಾನಗಿಇಂಜಿನಿಯರ್ಸ್ ಆಂಡ್ ಸೂಪರ್ ವೈಸರ್ಸ್ ಜುಲೈ 4ರ ಮುಂಚಿತವಾಗಿ ಸಮಸ್ಯೆ ಬಗೆಹರಿಸಬೇಕು. ನೋಟೀಸು ನೀಡಲಾದ ಕಟ್ಟಡಗಳ ಮಾಲೀಕರನ್ನು ಪಂಚಾಯತ್ ನ ಕಂದಾಯ ಇನ್ಸ್ ಪೆಕ್ಟರ್ ರು ನೇರವಾಗಿ ಭೇಟಿ ನಡೆಸಿ ಎನೆಲ್ಲ ಸಮಸ್ಯೆಗಳಿವೆ ಎಂಬುದನ್ನು ಮನವರಿಕೆ ಮಾಡಿಕೊಮಡಬೇಕು. ನಂತರ ಕಂದಾಯ ಇನ್ಸ್ ಪೆಕ್ಟರರ ವರದಿಗಳ ಹಿನ್ನೆಲೆಯಲ್ಲಿಸಮಸ್ಯೆ ಬಗೆಹರಿಸುವ ಬಗ್ಗೆ ಕಾರ್ಯದರ್ಶಿಗಳು ಕಟ್ಟಡ ಮಾಲೀಕರನ್ನು ದೂರವಾಣೀ ಮೂಲಕ ಸಂಪರ್ಕಿಸಿ ಕಾರಣ ಸ್ಪಷ್ಟವಾಗಿ ತಿಳಿಸಬೇಕು. ನಂತರವೂ ಸಮಸ್ಯೆ ಬಗೆಹರಿಯದೇ ಇದ್ದಲ್ಲಿ ಕಾರ್ಯದರ್ಶಿಗಳು ತೀರ್ಪಿಗೆ ಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.