ಕಾಸರಗೋಡು: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರಾಜ್ಯ ಮಹಿಳಾ ಆಯೋಗದ ಮೆಗಾ ಅದಾಲತ್ ನಲ್ಲಿ 43 ದೂರುಗಳನ್ನು ಪರಿಶೀಲಿಸಲಾಗಿದ್ದು, 7 ಪ್ರಕರಣಗಳಿಗೆ ತೀರ್ಪು ನೀಡಲಾಗಿದೆ. 6 ದೂರುಗಳಲ್ಲಿ ಸಂಬಂಧಪಟ್ಟ ಇಲಾಖೆಗಳಿಂದ ವರದಿ ಕೋರಲಾಗಿದೆ. 30 ದೂರುಗಳನ್ನು ಮುಂದಿನ ಅದಾಲತ್ ನಲ್ಲಿ ಪರಿಶೀಲಿಸಲಾಗುವುದು ಎಂದು ಆಯೋಗದ ಪ್ರತಿನಿಧಿ ಡಾ.ಶಾಹಿದಾ ಕಮಾಲ್ ತಿಳಿಸಿರುವರು.
ಚಿಕ್ಕ ವಯಸ್ಸಿನಲ್ಲಿ ವಿವಾಹಿತರಾಗಿ, ನಂತರ ಪತಿಯಿಂದ ಬೇರ್ಪಟ್ಟ ಮಹಿಳೆಯರ ಸಮಸ್ಯೆಗಳ ಬಗ್ಗೆ ದೂರುಗಳು ಅಧಿಕವಾಗಿದ್ದುವು. ಕ್ಷುಲ್ಲಕ ಕಾರಣಗಳಿಗೆ ಆರಂಭವಾದ ಪ್ರಕರಣಗಳು ಹೊಕೈ ವರೆಗೆ ತಲಪಿ ನಂತರ ಅದಾಲತ್ ಗೆ ದೂರು ಸಲ್ಲಿಕೆಯಾದ ಪ್ರಕರಣಗಳಿವೆ. ಕಡಿಮೆ ವೆಚ್ಚದಲ್ಲಿ ಕಡಿಮೆ ಅವಧಿಯಲ್ಲಿ ನ್ಯಾಯ ಒದಗಿಸುವುದು ಆಯೋಗದ ಉದ್ದೇಶ ಎಂದವರು ನುಡಿದರು.