ಪೆರ್ಲ:ದಿ.ಗೌರು ಮಾಧವ ಭಟ್ ಸ್ಮಾರಕ ಪೆರ್ಲ ವಿವೇಕಾನಂದ ಶಿಶುಮಂದಿರದ ಲೋಕಾರ್ಪಣೆ ಸಮಾರಂಭ ಜೂ.6ರಂದು ಬೆಳಿಗ್ಗೆ 10.30ಕ್ಕೆ ನಾಲಂದ ಮಹಾವಿದ್ಯಾಲಯ ಸಭಾಂಗಣದಲ್ಲಿ ಜರುಗಲಿದೆ.
ಕೇರಳ ರಾಜ್ಯ ಚಿನ್ಮಯ ಮಿಷನ್ ಕ್ಷೇತ್ರೀಯ ಮಖ್ಯಸ್ಥರಾದ ಶ್ರೀವಿವಿಕ್ತಾನಂದ ಸ್ವಾಮೀಜಿ ಶಿಶುಮಂದಿರದ ಲೋಕಾರ್ಪಣೆ ನಡೆಸಲಿದ್ದಾರೆ. ಪೆರ್ಲ ನಾಲಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಆನೆಮಜಲು ವಿಷ್ಣು ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಪುತ್ತೂರು ವಿವೇಕಾನಂದ ಶಿಕ್ಷಣ ಸಂಸ್ಥೆ ಉಪನ್ಯಾಸಕಿ ಡಾ. ಶೋಭಿತಾ ಸತೀಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪೆರ್ಲ ನಾಲಂದ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಶುಭ ಹಾರೈಸುವರು.ರಾಷ್ಟ್ರೀಯ ಸ್ವಯಂಸೇವಕ ಸಂಘ ಅಖಿಲ ಭಾರತ ಕುಟುಂಬ ಪ್ರಭೋದನ್ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದು ಸಾಮಾಜಿಕ ಕ್ಷೇತ್ರ, ಸಂಘ ಸಂಸ್ಥೆಗಳ ಸಹಿತ ವಿವಿಧ ರಂಗಗಳ ಗಣ್ಯರು ಉಪಸ್ಥಿತರಿರುವರು.