ಗುಹವಾಟಿ: ಎಂಟು ಸಿಬ್ಬಂದಿ ಹಾಗೂ ಐದು ಪ್ರಯಾಣಿಕರಿದ್ದ ಭಾರತೀಯ ವಾಯುಪಡೆಯ ವಿಮಾನವೊಂದು ಸೋಮವಾರ ನಾಪತ್ತೆಯಾಗಿದೆ.
ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಅಸ್ಸಾಂ ನ ಜೊರ್ಹತ್ ಏರ್ ಬೇಸ್ ನಿಂದ ಟೇಕ್ ಆಫ್ ಆಗಿದ್ದ ಭಾರತೀಯ ವಾಯುಪಡೆಯ ಎಎನ್-32 ವಿಮಾನ, ಇದುವರೆಗೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಗಳು ತಿಳಿಸಿವೆ.
ಒಟ್ಟು 13 ಜನರನ್ನು ಹೊತ್ತ ವಿಮಾನ ಮಧ್ಯಾಹ್ನ 1 ಗಂಟೆ ಗೆ ಟೇಕ್ ಆಫ್ ಆಗಿತ್ತು. ಅರುಣಾಚಲ ಪ್ರದೇಶದ ಮೆಂಚುಕಾ ಏರ್ ಫೀಲ್ಡ್ ನಲ್ಲಿ ಲ್ಯಾಂಡ್ ಆಗಬೇಕಾಗಿತ್ತು. ಆದರೆ ಯುದ್ಧ ವಿಮಾನ ಅರುಣಾಚಲ ಪ್ರದೇಶ ತಲುಪಿಲ್ಲ. ವಿಮಾನ ಪತ್ತೆಗೆ ಎಲ್ಲ ಮೂಲಗಳಿಂದ ಪ್ರಯತ್ನ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.