ಮಂಜೇಶ್ವರ: ಮಧುರ ಸಮಾಜ ನಿರ್ಮಾಣದ ಕನಸುಗಳೊಂದಿಗೆ ಬುದ್ದಿಗೆ ಚುರುಕು ನೀಡುವ ಅತ್ಯುತ್ತಮ ಸಾಹಿತ್ಯ ಕೃತಿಗಳ ಅವಲೋಕನ ವಿಮರ್ಶೆಗಳಿಗಾಗಿ ಸಾಹಿತಿ ದಂಪತಿಗಳಾದ ಟಿ.ಎ.ಎನ್ ಖಂಡಿಗೆ ಹಾಗೂ ಕವಿತಾ ಖಂಡಿಗೆ ದಂಪತಿಗಳು ತಮ್ಮ ಮನೆ ಕಣ್ವತೀರ್ಥದಲ್ಲಿ ಆಯೋಜಿಸುತ್ತಿರುವ ಸರಣಿ ಕೃತಿ ವಿಮರ್ಶಾ ಕಾರ್ಯಕ್ರಮದ 8ನೇ ಕೃತಿ ವಿಮರ್ಶೆ ಇಂದು ಅಪರಾಹ್ನ 3.30 ರಿಂದ ನಡೆಯಲಿದೆ.
ಎನ್ಕೆ ಹನುಮಂತಯ್ಯ ಅವರ ಮಾಂಸದಂಗಡಿಯ ನವಿಲು ಕವಿತಾ ಸಂಕಲನದ ಬಗ್ಗೆ ಪ್ರಾಧ್ಯಾಪಕ, ವಿಮರ್ಶಕ ಡಾ.ರಾಜಶೇಖರ ಹಳೆಮನೆ ಕೃತಿ ಸಂವಾದ ನಡೆಸುವರು. ಆಸಕ್ತ ಸಾಹಿತ್ಯ ಪ್ರೇಮಿಗಳಿಗೆ ಮುಕ್ತ ಸ್ವಾಗತವಿದೆ ಎಂದು ಸಂಘಟಕರು ತಿಳಿಸಿದ್ದಾರೆ.