ಪೆರ್ಲ: ಪ್ರಕೃತಿಯನ್ನು ಪ್ರೀತಿಸಿ, ಪೋಷಿಸಿದ ಹಿರಿಯರ ಅವಿರತ ಶ್ರಮದಿಂದ ನಾವು ಹಸಿರು ತುಂಬಿದ ಪ್ರಕೃತಿಯ ಫಲವನ್ನು ಅನುಭವಿಸುತ್ತಿದ್ದೇವೆ. ಆದರೆ ನಗರೀಕರಣ, ಕೈಗಾರೀಕರಣದ ಮಾಯಜಾಲದಲ್ಲಿ ನಾವು ಹಸಿರನ್ನು ನಾಶ ಮಾಡಿದ ಪರಿಣಾಮದ ಹೆಚ್ಚುತ್ತಿರುವ ತಾಪಮಾನವು ಮುನದಸೂಚನೆಯಾಗಿದ್ದು, ಜೀವಕೋಟಿಗೆ ಅಪಾಯದ ಕರೆಗಂಟೆಯಾಗಿದೆ. ಮರ ಗಿಡಗಳನ್ನು ಬೆಳೆಸಿ ವಾತಾವರಣವನ್ನು ತಂಪಾಗಿಸಬೇಕು. ಮಳೆಯ ಪ್ರಮಾಣ ಹೆಚ್ಚಾಗಿಸಬೇಕು. ಇಲ್ಲವಾದಲ್ಲಿ ಹೊಸ ತಲೆಮಾರಿನವರ ಬದುಕು ಶೋಚನಿಯವಾಗಬಹುದು ಎಂದು ವಿಶ್ವ ಪರಿಸರ ದಿನದ ಅಂಗವಾಗಿ ಪೆಲ9ದಲ್ಲಿ ನೇತಾಜಿ ಸಾವ9ಜನಿಕ ಗ್ರಂಥಾಲಯ ಆಯೋಜಿಸಿದ 'ನಾಳೆಗಾಗಿ ಹಸಿರು' ಸಂವಾದವನ್ನು ನಿಕಟಪೂವ9 ಎಣ್ಮಕಜೆ ಗ್ರಾಮ ಪಂಚಾಯತಿ ಕಾಯ9ದಶಿ9 ನಾರಾಯಣ ವೈ ಉದ್ಘಾಟಿಸಿ ತಿಳಿಸಿದರು.
ಗ್ರಂಥಾಲಯ ಅಧ್ಯಕ್ಷ ರಾಮಕೃಷ್ಣ ರೈ ಕುದ್ವ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯರುಗಳಾದ ಮೊಹಮ್ಮದ್ ಹನೀಫ್, ಪ್ರೇಮ, ಮಂಜೇಶ್ವರ ತಾಲೂಕು ಗ್ರಂಥಾಲಯ ಕೌನ್ಸಿಲರ್ ಉದಯ ಸಾರಂಗ, ವಿನೋದ್ ಮುಂತಾದವರು ಸಂವಾದದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಯಶಸ್ವಿಗೊಳಿಸಿದರು.
ಬಳಿಕ ಕಾಯ9ಕ್ರಮದಲ್ಲಿ ಭಾಗವಹಿಸಿದವರಿಗೆ ಗಿಡ ವಿತರಣೆ ಜರುಗಿತು.ಎಣ್ಮಕಜೆ ಗ್ರಾಮಾಧಿಕಾರಿ ಚಂದ್ರಶೇಖರ್ ಹಾಗೂ ಪೆಲ9 ಶ್ರೀಸತ್ಯನಾರಾಯಣ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಎನ್ ಗಿಡ ನೆಡುವ ಮೂಲಕ ಗ್ರಂಥಾಲಯದ ಮಹಾನ್ ಯೋಜನೆ 'ನಾಳೆಗಾಗಿ ನೆರಳು' ಎಂಬ ಅಭಿಯಾನಕ್ಕೆ ಚಾಲನೆ ನೀಡಿದರು. ಅನಿಲ್ ಕುಮಾರ್, ಸದಾನಂದ ನಲ್ಕ ಮುಂತಾದವರು ಉಪಸ್ಥಿತರಿದ್ದರು. ಗ್ರಂಥಾಲಯ ಸದಸ್ಯರಾದ ರಾಜೇಶ್ ಸ್ವಾಗತಿಸಿ, ಮಣಿಕಂಠ ವಂದಿಸಿದರು.