ಪೆರ್ಲ:ನಿವೃತ್ತಿ ಹೊಂದಲಿರುವ ಕೇರಳ ಗ್ರಾಮೀಣ ಬ್ಯಾಂಕ್ ವಾಣೀನಗರ ಶಾಖೆ ಪ್ರಬಂಧಕ ಕೆ.ಚಂದ್ರಶೇಖರನ್ ನಾಯರ್ ಅವರಿಗೆ ಶುಕ್ರವಾರ ಸ್ವರ್ಗದ ಬ್ಯಾಂಕ್ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಎಣ್ಮಕಜೆ ಗ್ರಾ.ಪಂ. ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ. ಅಧ್ಯಕ್ಷತೆ ವಹಿಸಿದರು.ಗ್ರಾ.ಪಂ. ಸದಸ್ಯೆ ಮಲ್ಲಿಕಾ ಜೆ.ರೈ, ಸ್ವರ್ಗ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್, ಕಾರ್ತಿಕ್ ಶಾಸ್ತ್ರಿ ಹಿರಣ್ಯಗರ್ಭ, ಮಾಜೀ ಪಂಚಾಯಿತಿ ಸದಸ್ಯ ನರಸಿಂಹ ಎಸ್.ಬಿ., ರಾಮಚಂದ್ರ ಶುಭ ಹಾರೈಸಿದರು.
ನಿವೃತ್ತಿ ಹೊಂದಲಿರುವ ಶಾಖಾ ಪ್ರಬಂಧಕ ಚಂದ್ರಶೇಖರನ್ ನಾಯರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಊರಿನವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ವಾಣೀನಗರ ವಾರ್ಡ್ ಸದಸ್ಯೆ ಶಶಿಕಲಾ ವೈ, ಸಿಬ್ಬಂದಿಗಳಾದ ಜಗದೀಶ್ ಸಿ.ಎಚ್., ಶ್ರೀಷ್ಣ ಸಿ., ಸುನಿಲ್, ವ್ಯಾಪಾರ ಸಂಸ್ಥೆಗಳ ಮಾಲಿಕರು, ಅಟೋ ಚಾಲಕರು, ಸ್ಥಳೀಯ ಕೃಷಿಕರು ಸಹಿತ ಬ್ಯಾಂಕ್ ಗ್ರಾಹಕರು ಉಪಸ್ಥಿತರಿದ್ದರು.
ಬ್ಯಾಂಕ್ ಸರಾಪ್ ಗುರುರಾಜ್ ಪ್ರಾರ್ಥಿಸಿದರು.ಗ್ರಾ.ಪಂ. ಮಾಜಿ ಸದಸ್ಯ ರವಿ ವಾಣೀನಗರ ಸ್ವಾಗತಿಸಿ,ನಿವೃತ್ತ ಕೇರಳ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ನಾರಾಯಣ ನಾಯ್ಕ್ ನಲ್ಕ ವಂದಿಸಿದರು.