ಉಪ್ಪಳ: ಕಯ್ಯಾರು ಡೋನ್ ಬೋಸ್ಕೊ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವನ್ನು ಗುರುವಾರ ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯೆ ರಾಜೀವಿ ರೈ ಉದ್ಘಾಟಿಸಿದರು.
ಶಾಲಾ ಸಂಚಾಲಕ ಫಾದರ್ ಐವನ್ ಡಿ'ಮೆಲ್ಲೊ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಯ್ಯಾರು ಕ್ರಿಸ್ತ ರಾಜ ದೇವಾಲಯದ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಡಿ'ಸೋಜ, ಮುಖ್ಯೋಪಾಧ್ಯಾಯ ಪೀಟರ್ ರೊಡ್ರಿಗಸ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸ್ಟೀಫನ್ ಕ್ರಾಸ್ತ, ಮಾತೆಯರ ಸಂಘದ ಅಧ್ಯಕ್ಷೆ ವಿಲ್ಮಾ ಡಿ'ಸೋಜ, ಹಿರಿಯ ಶಿಕ್ಷಕಿ ಮಾಗ್ದಲೆನ್ ಕ್ರಾಸ್ತ, ನೂತನ ಶಿಕ್ಷಕರಾದ ಕರ್ನೇಲಿಯಸ್ ಲೋಬೊ, ಪ್ಲಾವಿಯಾ ಡಿ'ಸೋಜ, ಸಬಿದಾ ಸಬಿದಾ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಪ್ರವೇಶೋತ್ಸವ ಮೆರವಣಿಗೆ ನಡೆಯಿತು. ಮುಖ್ಯೋಪಾಧ್ಯಾಯ ಪೀಟರ್ ರೋಡ್ರಿಗಸ್ ಸ್ವಾಗತಿಸಿ, ಶ್ರೀಮತಿ ಟೀಚರ್ ವಂದಿಸಿದರು. ಸಿಸ್ಟರ್ ರೀನಾ ಕಾರ್ಯಕ್ರಮ ನಿರೂಪಿಸಿದರು.