ಮಂಜೇಶ್ವರ:ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ 2019-20ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ಸಂಭ್ರಮದಿಂದ ಗುರುವಾರ ನೆರವೇರಿತು. ಪ್ರಾರ್ಥನೆಯೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ಪ್ರೇಮಾ.ಕೆ.ಭಟ್ ತೊಟ್ಟೆತ್ತೋಡಿ ಇವರು ನೂತನವಾಗಿ ದಾಖಲಾತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಸ್.ಪಿ.ಜಿ ಸಂಚಾಲಕ ಇಬ್ರಾಹಿಂ ಹೊನ್ನಕಟ್ಟೆ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ತಲೇಕಳ, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಹಾಗೂ ಹಿರಿಯ ಅಧ್ಯಾಪಕರಾದ ಶಿವಶಂಕರ ಭಟ್ ಮತ್ತು ಲಲಿತಾ.ಬಿ ಉಪಸ್ಥಿತರಿದ್ದರು. ಬಳಿಕ ಬಾಲಸುಬ್ರಹ್ಮಣ್ಯ ಭಟ್ ಕಡೆಂಕೋಡಿ ಹಾಗೂ ಕುಮಾರಿ ತೇಜಸ್ವಿನಿ ಇವರು ನಡೆಸಿಕೊಟ್ಟ ಮ್ಯಾಜಿಕ್ ಶೋ ವಿದ್ಯಾರ್ಥಿಗಳಲ್ಲಿ ಹೊಸ ಹುರುಪನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು. ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಪ್ರಾಂಶುಪಾಲ ರಮೇಶ್.ಕೆ.ಎಸ್ ವಂದಿಸಿದರು.
ಮೀಯಪದವು ಶಾಲಾ ಪ್ರವೇಶೋತ್ಸವ
0
ಜೂನ್ 07, 2019