HEALTH TIPS

ಅಕ್ಷಯ ಘಟಕಗಳಿಗೆ ಟ್ಯಾಬ್ ವಿತರಣೆ

       
      ಕಾಸರಗೋಡು: ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸುವ ಮೂಲಕ ಗಮನಸೆಳದಿರುವ ಜಿಲ್ಲೆಯ ಇ-ಡಿಸ್ಟ್ರಿಕ್ಟ್ ಯೋಜನೆಯನ್ನು ಹೆಚ್ಚುವರಿ ಸುಧಾರಿತಗೊಳಿಸುವ ನಿಟ್ಟಿನಲ್ಲಿ ಅಕ್ಷಯ ಘಟಕದಾರರಿಗೆ ಟ್ಯಾಬ್ (ಟ್ಯಾಬ್ಲೆಟ್) ವಿತರಣೆ ನಡೆಸಲಾಯಿತು.
      ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಟ್ಯಾಬ್(ಟ್ಯಾಬ್ಲೆಟ್) ವಿತರಣೆಯ ಉದ್ಘಾಟನೆ ನಡೆಸಿದರು.
     ಈ ಸಂದರ್ಭ ಮಾತನಾಡಿದ ಸಚಿವರು, ಕಂಪ್ಯೂಟರ್ ಸಾಕ್ಷರತೆ ತೆರೆದಿಡುವ ಮಾಹಿತಿ ತಂತ್ರಜ್ಞಾನ ಮೂಲಕದ ಅವಕಾಶಗಳನ್ನು ಯುವಜನತೆ ಪ್ರಯೋಜನ ಕಂಡುಕೊಳ್ಳಬೇಕು. ಕಂಪ್ಯೂಟರ್ ಸಾಕ್ಷರತೆ ಎಂಬ ಆಶಯದೊಂದಿಗೆ 2002ರಲ್ಲಿ ರಾಜ್ಯ ಸರಕಾರ ಆರಂಭಿಸಿದ್ದ ಅಕ್ಷಯ ಯೋಜನೆ ನಂತರ ಸರಕಾರಿ ಸೇವೆ ಜನಗಳಿಗೆ ತಲಪಿಸುವಲ್ಲಿ ಕ್ರಾಂತಿಕಾರಿ ಹೆಜ್ಜಯಿರಿಸಿದ್ದು, ದೊಡ್ಡ ಸೇವಾ ಕೇಂದ್ರಗಳಾಗಿ ಮಾರ್ಪಾಡುಗೊಂಡಿವೆ. ಕೆಲವೆಡೆ ಅಕ್ಷಯ ಕೇಂದ್ರಗಳ ಸಿಬ್ಬಂದಿಯೇ ನಕಾರಾತ್ಮಕ ಧೋರಣೆ ತೋರಿದ ಪರಿಣಾಮಜನ ತೊಂದರೆ ಅನುಭವಿಸುತ್ತಿದ್ದು, ಇದನ್ನು ಗಂಭೀರವಾಗಿ ಸ್ವೀಕರಿಸಿದ ಸರಕಾರ ಶೀಘ್ರದಲ್ಲೇ ಪರಿಹಾರ ಒದಗಿಸಲಿದೆ. ಅಕ್ಷಯ ಕೇಂದ್ರಗಳಿಲ್ಲದ ಪ್ರದೇಶಗಳಲ್ಲಿ ಅವುಗಳನ್ನು ಆರಂಭಿಸಲು ಸರಕಾರ ಕ್ರಮ ಕೈಗೊಳ್ಳುತ್ತಿದೆ ಎಂದರು.
      ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭ ಮಾತನಾಡಿದ ಸಂಸದ ಅಕ್ಷಯ ಕೇಂದ್ರಗಳ ಸಿಬ್ಬಂದಿ ಹೆಚ್ಚುವರಿ ಜನಪರರಾಗಬೇಕು. ಸಮಾಜಕ್ಕೆ, ದೇಶಕ್ಕೆ ಪ್ರತಿ ಪ್ರಜೆಯ ಹೊಣೆಗಾರಿಕೆಯಗತ್ಯವಿದೆ. ಅದು ಸಾರ್ವಜನಿಕ ಅಭಿವೃದ್ಧಿಗೆ ಪೂರಕವಾಗಿದೆ ಎಂದು ನುಡಿದರು.
     ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಅಕ್ಷಯ ರಾಜ್ಯ ಯೋಜನೆ ಕಚೇರಿ ಪ್ರಬಂಧಕ ರೆಜು ಟೋಂ ಲಾಲ್, ಜಿಲ್ಲಾಯೋಜನೆ ಪ್ರಬಂಧಕ ಕೆ.ಟಿ.ಶಾರಿಕಾ ಮೊದಲಾದವರು ಉಪಸ್ಥಿತರಿದ್ದರು.
    ಬಳಿಕ ಬಳಕೆದಾರರ ಸಂಪರ್ಕ(ಕಸ್ಟಮರ್ ಕೇರ್), ವ್ಯವಹಾರ ಅಭಿವೃದ್ದಿ(ಬಿಸಿನೆಸ್ ಮೋಟಿವೇಷನ್), ಘಟಕ ನಿರ್ವಹಣೆ(ಸೆಂಟರ್ ಮೆನೇಜ್ ಮೆಂಟ್) ಎಂಬ ವಿಷಯಗಳಲ್ಲಿ ಅಕ್ಷಯ ಸಂಪನ್ಮೂಲ ವ್ಯಕ್ತಿ ಹರೀಶ್ ಅವರು ತರಗತಿ ನಡೆಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries