ಸಮರಸ ಚಿತ್ರ ಸುದ್ದಿ: ಕಾಸರಗೋಡು: ರಾಷ್ಟ್ರೀಯ ಮಟ್ಟದಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ(ನ್ಯಾಶನಲ್ ಎಲಿಜಿಬಿಲಿಟಿ ಆ್ಯಂಡ್ ಎಂಟ್ರೆನ್ಸ್ ಟೆಸ್ಟ್) 31 ನೇ ರ್ಯಾಂಕ್ ಹಾಗು ಕೇರಳ ರಾಜ್ಯ ಮಟ್ಟದಲ್ಲಿ ದ್ವಿತೀಯ ರ್ಯಾಂಕ್ ಪಡೆದ ಮಧೂರು ವಿವೇಕಾನಂದ ನಗರದ ಹೃದ್ಯಲಕ್ಷ್ಮಿ ಅವರನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಅಭಿನಂದಿಸಿದರು.