HEALTH TIPS

ಸ್ನೇಹದ ಮನೆಯ ಪ್ರೀತಿಯ ಆರೈಕೆಯಿಂದ ನವಬಾಳು: ಶ್ರದ್ಧಾ ಮೂಲಕ ಮರಳಿ ಮನೆಗೆ

   
     ಮಂಜೇಶ್ವರ: ಮಂಜೇಶ್ವರ ಸ್ನೇಹಾಲಯದ ಪಾಲಿಗೆ ಇದು ಮತ್ತೊಂದು ಸಾರ್ಥಕ್ಯದ ಕ್ಷಣ. ಪ್ರೀತಿಯ ಓಲೈಕೆ, ಆತ್ಮೀಯ ಆರೈಕೆ, ಸೂಕ್ತ ಚಿಕಿತ್ಸೆ, ಆಪ್ತ ಸಮಾಲೋಚನೆಯ ಫಲವಾಗಿ ಮನೋವಿಕಲತೆಯಿಂದ ಗುಣಮುಖರಾಗಿ ಸಹಜ ಬದುಕಿಗೇರಿದ ಬರೋಬ್ಬರಿ 10 ಮಂದಿಯನ್ನು ಗುರುವಾರ ಮರಳಿ ಮನೆಗೆ ಸೇರಿಸಲಾಗಿದೆ. ಅವರೆಲ್ಲರೂ "ಶ್ರದ್ಧಾ" ಮೂಲಕ ಮತ್ತೆ ತಮ್ಮ ಮನೆಯನ್ನು, ಮನೆಯವರನ್ನು ಕಾಣಲಿದ್ದಾರೆ.
     ಕಳೆದ ಮಾರ್ಚ್ ನಾಲ್ಕರಂದು ಸ್ನೇಹಾಲಯ ತಂಡವು ಮಂಜೇಶ್ವರ ಕುಂಜತ್ತೂರಿನ ರಸ್ತೆ ಬದಿಯಿಂದ ಕರೆ ತಂದಿದ್ದ ಮಹಾರಾಷ್ಟ್ರ ನಿವಾಸಿ ಆಸಿಫ್ (45), ಏಪ್ರಿಲ್ 19 ರಂದು ಮಂಗಳೂರಿನ ಬಲ್ಮಠದಿಂದ ಕರೆತರಲಾದ ಹರ್ಯಾನಾದ ಸಂಜಯ್ (58), ಪಶ್ಚಿಮ ಬಂಗಾಲದ ದೇವಿ ಪ್ರಸಾದ್ (28), ಏಪ್ರಿಲ್ 23 ರಂದು ಉಡುಪಿ ಗಂಗೊಳ್ಳಿಯಿಂದ ಊರವರ ಕರೆಯಂತೆ ತೆರಳಿ ಕರೆತಂದ ಉತ್ತರ ಪ್ರದೇಶದ ಝಮೀರ್ (28), 24 ರಂದು ಮಂಗಳೂರು ನಗರದಿಂದ ಹಿಡಿದು ತರಲಾದ ಉತ್ತರ ಪ್ರದೇಶದ ಸುರೇಶ (30), 27 ರಂದು ಕುಂಬಳೆ ಬಳಿ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ವೇಳೆ ಹಿಡಿದು ತರಲಾದ ಮಹಾರಾಷ್ಟ್ರದ ಕಾಳು (53), ಮೇ 17 ರಂದು ಮಂಜೇಶ್ವರದ ಹೊಸಂಗಡಿ ಬಸ್ ನಿಲ್ದಾಣ ಸಮೀಪದಿಂದ ಕರೆತಂದ ಬಿಹಾರದ ಚಂದನ್ (28), ಮೇ 19 ರಂದು ಮಂಗಳೂರು ರೈಲು ನಿಲ್ದಾಣದಿಂದ ಕರೆತಂದ ಮಿಝೋರಾಂ ನಿವಾಸಿ ಶ್ಯಾಮ್ ರಥನ್ ಚಕ್ರ (29), ಅದೇ ದಿನ ಮಂಗಳೂರು ಕುಳೂರಿನಿಂದ ಕರೆ ತರಲಾದ ಪಶ್ಚಿಮ ಬಂಗಾಲದ ಚೋಟು ಸಿಂಗ್ ಸರ್ದಾರ್ (75) ಹಾಗೂ ಮೇ 29 ರಂದು ಮಂಜೇಶ್ವರ ಬಸ್ ನಿಲ್ದಾಣದಿಂದ ತರಲಾದ ಬಿಹಾರ ನಿವಾಸಿ ಸಲೀಂದರ್ (38) ಎಂಬವರನ್ನು ಗುರುವಾರ ಸ್ನೇಹಾಲಯವು ಹೃದಯಂಗಮವಾಗಿ  ಊರಿಗೆ ಬೀಳ್ಕೊಟ್ಟಿದೆ. ಹೊಸ ಬಟ್ಟೆ ಬರೆಗಳನ್ನು ಧರಿಸಿ ನವೋತ್ಸಾಹದಿಂದ  ಎಲ್ಲರಿಗೂ ಬಾೈ ಹೇಳಿ ಅವರು ಸಂತೋಷದಿಂದ, ಅದಕ್ಕಿಂತಲೂ ಹೆಚ್ಚಿನ ಕೃತಜ್ಞತಾ ಭಾವದಿಂದ ಸ್ನೇಹಾಲಯದ ಗಾಡಿಯೇರಿ ಮುಂಬಯಿಗೆ ಮರಳಿದರು. ಸ್ನೇಹ ಮಂದಿರಕ್ಕೆ ಕರೆತಂದಿದ್ದ ವೇಳೆ ಇವರೆಲ್ಲರೂ ಪೂರ್ಣ ಮತಿ ವಿಕಲರಾಗಿದ್ದರು. ರಸ್ತೆ ಬದಿಯಲ್ಲಿ, ಚರಂಡಿಯಲ್ಲಿ ಬಿದ್ದುಕೊಂಡು ಮರಣದತ್ತ ಮುಖ ಮಾಡಿದ್ದವರು ಹಲವರು. ಕೆಲವರು ತೀವ್ರ ಆಕ್ರಮಣಶಾಲಿಗಳಾಗಿ ನಾಡಿನ ನಾಗರಿಕರ ನೆಮ್ಮದಿಯ ಬದುಕಿಗೆ ಕಂಟಕವಾಗುತ್ತಿದ್ದರು. ಆದರೀಗ.......
        ಅವರೆಲ್ಲರೂ ಬದಲಾಗಿದ್ದಾರೆ. ಸ್ನೇಹದ ಬೀಡಿಗೆ ಬರುವ ವರೆಗೆ ತಾವು ಎಲ್ಲಿ, ಹೇಗಿದ್ದೆವೆಂಬುವುದು ಅವರ ಸ್ಮøತಿ ಪಟಲದಲ್ಲಿ ಹೊಮ್ಮುತ್ತಿಲ್ಲವಾದರೂ ಈಗ ತಮ್ಮನ್ನು, ತಮ್ಮವರನ್ನು ಗುರುತಿಸಲು ಸಫಲರಾಗಿದ್ದಾರೆ. ಹಾಗೆ, ಕೃತಜ್ಞತಾಭಾವದಿಂದ ಮನೆ ಸೇರುವಂತಾಗಿದ್ದಾರೆ.
    ದೇಶಕ್ಕೇ ಮಾದರಿಯಾಗಿ ಮುಂಬಯಿ ಕೇಂದ್ರೀಕರಿಸಿ ಸೇವಾ ಸಾಫಲ್ಯ ಕಂಡಿರುವ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರವಾಗಿರುವ ಶ್ರದ್ಧಾವು ಹಿರಿಯ ಮನೋರೋಗ ತಜ್ಞ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಡಾ. ಭರತ್ ವಟ್ವಾಣಿ ಹಾಗೂ ಪತ್ನಿ ಡಾ. ಸ್ಮಿತಾ ವಟ್ವಾಣಿ ಅವರ ಸಂಸ್ಥೆ. ಮನೋ ಸಾಮಥ್ರ್ಯ ಹೊಂದಿದ ಮಂದಿ ಮರೆತಿದ್ದರೂ ಅವರ ವಿಳಾಸ ಪತ್ತೆ ಹಚ್ಚಿ ಸುರಕ್ಷಿತವಾಗಿ ಊರಿಗೆ ಸೇರಿಸಲು "ಶ್ರಧ್ಧಾ"ದಲ್ಲಿ ಮೀಸಲಾದ ವಿಶೇಷ ಸೇವಾ ತಂಡವಿದೆ. ಸ್ನೇಹಾಲಯವು ಈ ನಿಟ್ಟಿನಲ್ಲಿ ಶ್ರದ್ಧಾದ ಸೇವಾ ನೆರವನ್ನು ಬಳಸುತ್ತಿದೆ. ಕಳೆದೊಂದು ವರ್ಷದಲ್ಲಿ ಸ್ನೇಹಾಲಯದಿಂದ ಗುಣಮುಖರಾದ 120 ರಷ್ಟು ಮಂದಿ ಶ್ರದ್ಧಾ ಮೂಲಕ ಮರಳಿ ಮನೆ ಸೇರಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries