ಮಂಜೇಶ್ವರ: ಕಲೆಯ ಆರಾಧನೆಯಿಂದ ಸಮಾಜ ಸಮೃದ್ಧಗೊಳ್ಳುತ್ತದೆ. ಕಲೆಯ ಪೆÇೀಷಣೆಯೂ ಉತ್ತಮ ವ್ಯಕ್ತಿತ್ವದ ಬೆಳವಣಿಗೆಗೂ ಸಹಕಾರಿಯಾಗುತ್ತದೆ ಎಂದು ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಯವರು ನುಡಿದರು.
ಹೊಸಬೆಟ್ಟು ಕುಲಾಲ ಸಮಾಜ ಮಂದಿರದಲ್ಲಿ ಇತ್ತೀಚೆಗೆ ನಡೆದ ಸೃಷ್ಟಿ ಕಲಾ ಭೂಮಿ ಬೆಂಗಳೂರು ಸಂಸ್ಥೆಯ ಕಾಸರಗೋಡು ಘಟಕವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಆಶೀರ್ವಚನಗೈದು ಅವರು ಮಾತನಾಡಿದರು.
ಬಳಿಕ ಸ್ವಾಮೀಜಿಯವರು ವಿದ್ಯಾನಿಧಿ ಯೋಜನೆಯಂಗವಾಗಿ ಮಂಜೇಶ್ವರ ಆಸುಪಾಸಿನ ಸರಕಾರಿ ಶಾಲೆಯ 100 ಮಂದಿ ಬಡ ಮಕ್ಕಳಿಗೆ ಪುಸ್ತಕ, ಬ್ಯಾಗ್, ಕೊಡೆ, ಹಾಗೂ ಪರಿಕರಗಳನ್ನು ವಿತರಿಸಿದರು.
ಉದ್ಯಾವರ ಮಾಡ ಶ್ರೀಅರಸು ಮಂಜಿಷ್ಣಾರ್ ದೈವ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡ ಅಧ್ಯಕ್ಷತೆ ವಹಿಸಿದ್ದರು. ತುಳುನಾಡ ಬೊಳ್ಳಿ ಅಬ್ದುಲ್ಲ ಮಾದುಮೂಲೆ ಅಬುದಾಬಿಯವರು ಹಾಗೂ ರಾಜ ಬೆಳ್ಚಪ್ಪಾಡ ಅವರು ಸೃಷ್ಟಿ ಕಲಾ ಭೂಮಿಯ ನೂತನ ಲಾಂಛನವನ್ನು ಬಿಡುಗಡೆ ಗೊಳಿಸಿದರು.
ವೇದಿಕೆಯಲ್ಲಿ ಗ್ಲೋಬಲ್ ಬ್ಯುಸಿನೆಸ್ ಗ್ರೂಪ್ ನ ಸಂಸ್ಥಾಪಕ ಡಾ. ವಿನೋದ್ ಕುಮಾರ್ ಶೆಟ್ಟಿ, ಪತ್ರಕರ್ತ ಸಲಾಂ ವರ್ಕಾಡಿ, ಬೆಂಗಳೂರು ಉದ್ಯಮಿಗಳಾದ ರಾಜೇಶ್ ಶೆಟ್ಟಿ ಕುತ್ಯಾರ್, ಕಾಂತರಾಜ್ ಎಂ.ಜೆ, ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ. ರವೀಂದ್ರ ಮುನ್ನಿಪ್ಪಾಡಿ, ಬಂಟರ ಸಂಘ ಮುಂಬೈಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪುರುಷೋತ್ತಮ ಚೆಂಡ್ಲ, ಯಕ್ಷ ಮಿತ್ರರು ಬಸವೇಶ್ವರ ನಗರ ಬೆಂಗಳೂರಿನ ನಾಗರಾಜ್ ಆಚಾರ್ಯ, ಸೃಷ್ಟಿ ಕಲಾ ಭೂಮಿ ಬೆಂಗಳೂರಿನ ಗೌರವ ಸಲಹೆಗಾರ ಶ್ರೀಧರ್ ಶೆಟ್ಟಿ, ಭಾಸ್ಕರ್ ಬಂಗೇರ ಕುವೈಟ್, ಮಂಗಳೂರು ಉದ್ಯಮಿಗಳಾದ ಆಶಾ ಶೆಟ್ಟಿ ಅತ್ತಾವರ್, ವಿಜಯ ನಾಯರ್, ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಪ್ರಧಾನ ಸಂಪಾದಕ ಎಸ್.ಆರ್ ಬಂಡಿಮಾರ್, ಸಾಮಾಜಿಕ ಕಾರ್ಯಕರ್ತ ನ್ಯಾಯವಾದಿ. ನವೀನ್ ರಾಜ್ ಕೆ. ಜೆ, ಏಣ್ಮಕಜೆ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ.ಪೆರ್ಲ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಸಂದರ್ಭ ಸೃಷ್ಟಿ ಕಲಾ ಭೂಮಿಯ ಲಾಂಛನವನ್ನು ರೂಪಿಸಿದ ಕಲಾವಿದ ಸಂತೋಷ್ ಆಚಾರ್ಯ ದಂಪತಿಗಳನ್ನು ಹಾಗೂ ದುಬೈ ಉದ್ಯಮಿ, ತುಳುನಾಡ್ದ ಬೊಳ್ಳಿ ಅಬ್ದುಲ್ಲ ಮಾದುಮೂಲೆಯವರನ್ನ ಶಾಲು ಹೊದಿಸಿ, ಸ್ಮರಣಿಕೆ, ಫಲಫುಷ್ಪಗಳನ್ನಿತ್ತು ಗೌರವಿಸಲಾಯಿತು. ಸೃಷ್ಟಿ ಕಲಾ ಭೂಮಿಯ ಸಂಸ್ಥಾಪಕ ಸಂಕಬೈಲ್ ಮಂಜುನಾಥ ಅಡಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಎಚ್.ಕೆ. ನಯನಾಡ್ ಕಾರ್ಯಕ್ರಮ ನಿರೂಪಿಸಿದರು. ರತನ್ ಕುಮಾರ್ ಹೊಸಂಗಡಿ ಶಾಲಾ ವಿದ್ಯಾರ್ಥಿಗಳ ವಿವರಗಳನ್ನ ವಾಚಿಸಿದರು. ಕುಮಾರಿ ವರ್ಷಿತ ಶೆಟ್ಟಿ ಬೆಜ್ಜಂಗಳ, ಪ್ರಾರ್ಥನೆ ಹಾಡಿ, ವಂದಿಸಿದರು. ಕಮಲಾಕ್ಷ ದುರ್ಗಿಪಳ್ಳ, ಸನತ್ ರಾಜ್ ಸಹಕರಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೊಳಿಕೆ ಜಾನಪದ ಕಲಾ ತಂಡ ಕನ್ಯಪ್ಪಾಡಿ ತಂಡದವರಿಂದ ಸಾಂಸ್ಕೃತಿಕ ಸಂಭ್ರಮ ತುಳುನಾಡ ಪಾಡ್ದನ ಮೇಳ ನಡೆಯಿತು.