ಕಾಸರಗೋಡು: ಇಂದು(ಜೂ.21) ಕಾಸರಗೋಡು ಜಿಲ್ಲೆಯಲ್ಲಿ, ನಾಳೆ(ಜೂ.22) ಕಾಸರಗೋಡು, ಕಣ್ಣೂರು, ಕೋಯಿಕೋಡ್ ಜಿಲ್ಲೆಗಳಲ್ಲಿ ಕೇಂದ್ರ ಹವಾಮಾನ ನಿಗಾ ಕೇಂದ್ರ "ಆರೆಂಜ್" ಅಲೆರ್ಟ್ ಘೋಷಿಸಿದೆ.
ಆರೆಂಜ್ ಅಲೆರ್ಟ್ ಘೋಷಿಸಲಾದ ಜಿಲ್ಲೆಗಳಲ್ಲಿ ಕೆಲವು ಪ್ರದೇಶಗಳಲ್ಲಿ ಪ್ರಬಲ(115 ಮಿಮಿ ವರೆಗೆ ಮಳೆ), ಅತಿ ಪ್ರಬಲ(115 ಮಿಮೀಯಿಂದ 204.5 ಮಿಮಿ ವರೆಗೆ ಮಳೆ) ಮಳೆ ಸುರಿಯುವ ಸಾಧ್ಯತೆಗಳಿವೆ. ಸರಕಾರಿ ವ್ಯವಸ್ಥೆ ಮತ್ತು ಸಾರ್ವಜನಿಕರು ಜಾಗೃತೆ ಪಾಲಿಸುವಂತೆ ಆರೆಂಜ್ ಅಲೆರ್ಟ್ ಘೋಷಣೆ ಮೂಲಕ ತಿಳಿಸಲಾಗುತ್ತಿದೆ.
ಎಲ್ಲೋ ಅಲೆರ್ಟ್ ಘೋಷಣೆಯಾಗಿರುವ ಜಿಲ್ಲೆಗಳು:
ಜೂ.21ರಂದು ಎರ್ನಾಕುಲಂ,ಇಡುಕ್ಕಿ, ಪಾಲಕ್ಕಾಡ್,ಮಲಪಪ್ಪುರಂ, ಕೋಯಿಕೋಡ್, ವಯನಾಡ್, ಕಣ್ಣೂರು.
ಜೂ.22ರಂದು ಆಲಪ್ಪುಳ, ಎರ್ನಾಕುಲಂ, ಇಡುಕ್ಕಿ, ಪಾಲಕ್ಕಾಡ್, ಮಲಪ್ಪುರಂ, ವಯನಾಡ್.
ಜೂ.23ರಂದು ಕೋಯಿಕೋಡ್, ಕಾಸರಗೋಡು.
ಜೂ.24ರಂದು ಎರ್ನಾಕುಲಂ, ಕಣ್ಣೂರು, ಕಾಸರಗೋಡು.
ಈ ಜಿಲ್ಲೆಗಳಲ್ಲಿ ಕೆಲವೆಡೆ ಪ್ರಬಲ ಮಳೆ(64.5-115.5 ಮಿಮೀ) ಸಾಧ್ಯತೆಯಿದೆ. ಸಂಬಂಧಪಟ್ಟ ಇಲಾಖೆಗಳ ಸಿಬ್ಬಂದಿ ಅಗತ್ಯವಿರುವ ಸಿದ್ಧತೆ ನಡೆಸುವಂತೆ , ತಾಲೂಕು ಮಟ್ಟದ ನಿಯಂತ್ರಣ ಕೊಠಡಿಗಳನ್ನು ಆರಂಭಿಸುವಂತೆ ರಾಜ್ಯದುರಂತ ನಿವಾರಣೆ ಪ್ರಾಧಿಕಾರ ಆದೇಶ ನೀಡಿದೆ.
ಜಿಲ್ಲೆಯಲ್ಲಿ ಈ ವರೆಗೆ 368.15 ಮಿಮೀ ಮಳೆ
ಮಳೆಗಾಲ ಆರಂಭಗೊಂಡ ನಂತರ ಜಿಲ್ಲೆಯಲ್ಲಿ ಈ ವರೆಗೆ 368.15 ಮಿಮೀ ಮಳೆ ಲಭಿಸಿದೆ. ಕಳೆದ 24 ತಾಸುಗಳಲ್ಲಿ ಜಿಲ್ಲೆಯಲ್ಲಿ 132.85 ಮಿಮೀ ಮಳೆ ಸುರಿದಿದೆ. ಈ ವರೆಗೆ ಒಂದು ಮನೆ ಪೂರ್ಣ ರೂಪದಲ್ಲಿ, 29 ಮನೆಗಳು ಭಾಗಶಃ ಹಾನಿಗೀಡಾಗಿವೆ.