ಉಪ್ಪಳ: ಬಾಯಾರಿನ ಹೆದ್ದಾರಿ ಶಾಲಾ ಮಿತ್ರಮಂಡಳಿ ಗ್ರಂಥಾಲಯ ಮತ್ತು ವಾಚನಾಲಯದಲ್ಲಿ ವಾಚನ ಪಕ್ಷಾಚರಣೆ ಮತ್ತು ಗಿರೀಶ್ ಕಾರ್ನಾಡರಿಗೆ ಶ್ರದ್ದಾಂಜಲಿ-ನುಡಿನಮನ ಕಾರ್ಯಕ್ರಮ ಇಂದು(ಬುಧವಾರ) ನಡೆಯಲಿದೆ.
ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್.ನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಲೈಬ್ರರಿ ಕೌನ್ಸಿಲ್ ರಾಜ್ಯ ಸಮಿತಿ ಸದಸ್ಯ ಯು.ಶಾಮ ಭಟ್ ಉದ್ಘಾಟಿಸುವರು. ಹೆದ್ದಾರಿ ಶಾಲಾ ಮುಖ್ಯೋಪಾಧ್ಯಾಯ ಆದಿ ನಾರಾಯಣ ಭಟ್ ಅವರು ವಾಚನ ಪಕ್ಷಾಚರಣೆ ಹಾಗೂ ಹೆದ್ದಾರಿ ಶಾಲಾ ಮಿತ್ರಮಂಡಳಿಯ ಕಾರ್ಯದರ್ಶಿ ಗೀತಾ ಕೆ. ಅವರು ಗಿರೀಶ್ ಕಾರ್ನಾಡ್ ಅವರ ಬಗ್ಗೆ ಮಾತನಾಡುವರು. ಮಿತ್ರಮಂಡಳಿಯ ಕೌನ್ಸಿಲರ್ ವೆಂಕಟರಮಣ ಆಚಾರ್ಯ ಹಾಗೂ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅವರು ಶುಭಾಶಂಸನೆಗೈಯ್ಯುವರು.