ಕುಂಬಳೆ: ಮೊಗ್ರಾಲ್ ಪುತ್ತೂರು ಬಿಲ್ಲವ ಸೇವಾ ಸಂಘ ಬೆದ್ರಡ್ಕ ಇದರ ನೇತೃತ್ವದಲ್ಲಿ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭವು ಬೆದ್ರಡ್ಕದ ಶ್ರೀಪೂಮಾಣಿ-ಕಿನ್ನಿಮಾಣಿ ದೈವಸ್ಥಾನದ ಪರಿಸರದಲ್ಲಿ ಭಾನುವಾರ ನಡೆಯಿತು.
ಪುಳ್ಕೂರು ಶ್ರೀಮಹಾದೇವ ಸೇವಸ್ಥಾನದ ಪ್ರಧಾನ ಅರ್ಚಕ ಪ್ರಭಾಕರ ಕಾರಂತ ದೇಶಮಂಗಲ ಅವರು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಕಣ್ಣೂರು ವಿಶ್ವವಿದ್ಯಾನಿಲಯದ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಎರಡನೇ ರ್ಯಾಂಕ್ ವಿಜೇತೆ ವಿಶಾಲಾಕ್ಷಿ ಬಿ.ಕೆ ಅವರಿಗೆ ಕಾಸರಗೋಡು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಕಮಲಾಕ್ಷ ಕೆ. ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಿದರು. ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಸದಸ್ಯ ರಘು ಮೀಪುಗುರಿ ಉಪಸ್ಥಿತರಿದ್ದು ಶುಭಹಾರೈಸಿದರು. ಪ್ರಭಾಕರ ಆಳ್ವ ಕೋಟೆಕುಂಜ, ಶಿವ ಕೆ.ಸೂರ್ಲು, ದಯಾನಂದ ಕಾಸರಗೋಡು, ಬಾಬು ಬಿ.ಕೆ., ಬೋಜರಾಜ ಆಚಾರ್ಯ ದೇಶಮಂಗಲ ಶುಭಹಾರೈಸಿದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಉಚಿತ ಕಲಿಕೋಪಕರಣಗಳನ್ನು ವಿತರಿಸಲಾಯಿತು. ಬೆದ್ರಡ್ಕ ಘಟಕದ ಅಧ್ಯಕ್ಷ ಉಮೇಶ್ ಕೆ. ಸ್ವಾಗತಿಸಿ, ಕಾರ್ಯದರ್ಶಿ ಚಂದ್ರಶೇಖರ ಪೂಜಾರಿ ನೀರಾಳ ವಂದಿಸಿದರು.