ಕಾಸರಗೋಡು: ಸಾರ್ವಜನಿಕರ ಅನೇಕ ಕಾಲದ ಆಗ್ರಹ ನೆರವೇರಿಸುವ ನಿಟ್ಟಿನಲ್ಲಿ ಕುತ್ತಿಕೋಲ್ ಗ್ರಾಮಪಂಚಾಯತಿಯ ಪೊಟ್ಟಂಕೆರೆ ಪುನಶ್ಚೇತನಕ್ಕೆ ಸಿದ್ಧವಾಗಿದೆ.
ಜಿಲ್ಲಾ ಪಂಚಾಯತಿ 5 ಲಕ್ಷ ರೂ., ಕಾರಡ್ಕ ಬ್ಲಾಕ್ ಪಂಚಾಯತಿ ಏಳೂವರೆ ಲಕ್ಷ ರೂ.ನಂತೆ 12.5 ಲಕ್ಷ ರೂ. ವೆಚ್ಚದಲ್ಲಿ ಪೊಟ್ಟಂ ಕೆರೆ ಪುನರ್ ನಿರ್ಮಾಣಗೊಳ್ಳಲಿದೆ. ಇದರ ಕಾಮಗಾರಿಯ ಉದ್ಘಾಟನೆ ಶೀಘ್ರದಲ್ಲೇ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದರು.
ಕುತ್ತಿಕೋಲ್ ಗ್ರಾಮಪಂಚಾಯತ್ ನ 16ನೇ ಆರ್ಡ್ ಆಗಿರುವ ಇಡಕ್ಕಾಡ್ ಎಂಬ ಪ್ರದೇಶದಲ್ಲಿ ಈ ಪೊಟ್ಟಂಕೆರೆ ಇದೆ. ಈ ಪ್ರದೇಶದ ಬಹುತೇಕ ಮಂದಿ ಕೃಷಿಕರಾಗಿದ್ದಾರೆ. ಹಿಂದೆ ಈ ಕೆರೆಯ ನೀರನ್ನು ಇಲ್ಲಿನ ಜನನಿತ್ಯೋಪಯೋಗಕ್ಕೆ ಬಳಸುತ್ತಿದ್ದರು. ಇಂದು ಕೆರೆಯ ಆವರಣ ತುಂಬ ಕಾಡುಪೊದೆ ಬೆಳೆದು, ನೀರು ಹಾಳಾಗಿದೆ.
ಕೆರೆಯ ನವೀಕರಣದೊಂದಿಗೆ ಇಲ್ಲಿನ ಎಕ್ರೆ ಗಟ್ಟಲೆ ಕೃಷಿ ಜಾಗಕ್ಕೆ ನೀರಾವರಿ ಒದಗಲಿದೆ. ಭೂಗರ್ಭ ಜಲದ ಸಂರಕ್ಷಣೆ ಮತ್ತು ಪ್ರಕೃತಿ ಸಂರಕ್ಷಣೆಯೂ ನಡೆಯಲಿದೆ ಎಂದು ಪಂಚಾಯತ್ ಪದಾಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಕಾಮಗಾರಿಯ ಅಂಗವಾಗಿ ಕರೆಯ ಆವರಣದ ಕಾಡುಪೊದೆ ನಿವಾರಿಸಿ. ಸುತ್ತಲ ಪ್ರದೇಶವನ್ನು ಶುಚಿಗೊಳಿಸಲಾಗಿದೆ. ಹಿಂದಿನ ಜಲಸಮೃದ್ಧಿ ಈ ಕೆರೆಯೆ ನವೀಕರಣದೊಂದಿಗೆ ಸಾಧ್ಯವಾಗಲಿದೆ ಎಂದು ಸಂತೋಷ ಇಲ್ಲಿನ ನಿವಾಸಿಗಳದ್ದು.