ಉಪ್ಪಳ: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ವಾಚನ ದಿನಾಚರಣೆ ಉದ್ಘಾಟನೆ ಸಮಾರಂಭ ಬುಧವಾರ ಜರಗಿತು. ಹಿರಿಯ ಉಪನ್ಯಾಸಕ ಸತೀಶ್ ಅರಮಂಗಿಲ ಮಕ್ಕಳಿಗೆ ಪುಸ್ತಕ ವಿತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಚರಣಾ ಸಮಿತಿ ಸಂಚಾಲಕ ಕೃಷ್ಣಮೂರ್ತಿ ಎಂ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಆರ್.ಜಿ ಸಂಚಾಲಕಿ ಶಶಿಕಲ ಕೆ, ಸಮಾಜವಿಜ್ಞಾನ ಕ್ಲಬ್ ನ ಅಬ್ದುಲ್ ಲತೀಫ್, ಪ್ರವೀಣ್ ಕನಿಯಾಲ ಉಪಸ್ಥಿತರಿದ್ದರು. ಚೇತನ್ ರಾಜ್ ಯು ಸ್ವಾಗತಿಸಿ, ನಿಶ್ಮಿತ ಎಸ್.ಸಿ ವಂದಿಸಿದರು. ನಫೀಸತ್ ಮಿಸ್ರಿಯ ಜೆ. ನಿರೂಪಿಸಿದರು. ವಿದ್ಯಾರಂಗ ಸಂಚಾಲಕಿ ರೈನ ಇವೆಟ್ ಡಿಸೋಜ ನೇತೃತ್ವ ನೀಡಿದರು.