ಬದಿಯಡ್ಕ: ಜೂನ್ 1 ಮಿಲ್ಮ ಡೇ ಅಂಗವಾಗಿ ಬದಿಯಡ್ಕ ಹಾಲುತ್ಪಾದಕರ ಸಂಘದ ಆಶ್ರಯದಲ್ಲಿ ಬದಿಯಡ್ಕದಲ್ಲಿ ಕಾರ್ಯಕ್ರಮ ನಡೆಯಿತು.
ಬದಿಯಡ್ಕ ಗ್ರಾ.ಪಂ. ಸದಸ್ಯ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಹಸು ಸಾಕಣೆಯಿಂದ ಸ್ವಾವಲಂಬಿ ಬದುಕು ಸಾಧ್ಯ. ದನದ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದುದರಿಂದ ಹೈನುಗಾರಿಕೆಯಲ್ಲಿ ಹೆಚ್ಚು ಜನರು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಬದಿಯಡ್ಕ ಹಾಲುತ್ಪಾದಕರ ಸಂಘದ ಅಧ್ಯಕ್ಷ ಕೆ.ಎ.ಶೆಟ್ಟಿ ಅದ್ಯಕ್ಷತೆ ವಹಿಸಿ ಜನರ ಉತ್ತಮ ರೀತಿಯ ಸಹಕಾರ ಬದಿಯಡ್ಕ ಹಾಲುತ್ಪಾದಕರ ಸಂಘದ ಬೆಳವಣಿಗೆಗೆ ಕಾರಣವಾಗಿದೆ. ಈ ಪ್ರದೇಶದ ಹಾಲುತ್ಪಾದರಕು ಸಕಾಲದಲ್ಲಿ ಸೊಸೈಟಿಗೆ ಹಾಲನ್ನು ತಂದೊಪ್ಪಿಸುವಲ್ಲಿ ತೋರುವ ಆಸಕ್ತಿ ಮತ್ತು ಹೆಚ್ಚುತ್ತಿರುವ ಬೇಡಿಕೆ ಉತ್ತಮವಾಗಿದೆ. ಆಡಳಿತ ಮಂಡಳಿ ಸದಸ್ಯರಾದ ಸದಾನಂದ ರೈ ಶುಭಾಶಂಸನೆಗೈದರು. ಉಮಾನಾಥ ಕಾಮತ್ ಉಪಸ್ಥಿತರಿದ್ದರು. ಸುರೇಖ ಸ್ವಾಗತಿಸಿ ಆಶೋಕ ರೈ ವಂದಿಸಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಬೆಳಿಗ್ಗೆ ಡೈರಿಗೆ ಹಾಲು ತಂದವರಿಗೆ ಹಾಲಿನಿಂದ ತಯಾರಿಸಿದ ಸಿಹಿ ತಿಂಡಿಗಳನ್ನು ವಿತರಿಸಿ ಮಿಲ್ಮ ಡೇಯ ಶುಭ ಕೋರಲಾಯಿತು.