HEALTH TIPS

ನಾಳೆ ನಡೆಯಲಿದೆ ಕನ್ನಡಿಗರ ಧರಣಿ ಸತ್ಯಾಗ್ರಹ : ವ್ಯಾಪಕ ಬೆಂಬಲ- ಸತ್ಯಾಗ್ರಹಕ್ಕೆ ಸಿರಿಚಂದನ ಬಳಗದ ಬೆಂಬಲ


                 
          ಕಾಸರಗೋಡು: ಕಾಸರಗೋಡಿನ ಉದ್ಯೋಗಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲು ಆ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲು ಕನ್ನಡ ಹೋರಾಟ ಸಮಿತಿಯು ಜೂನ್ 22 ರಂದು ಬೆಳಗ್ಗೆ 10 ಗಂಟೆಯಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪ ನಡೆಸಲು ಉದ್ದೇಶಿಸಿರುವ ಕನ್ನಡಿಗರ ಧರಣಿ ಸತ್ಯಾಗ್ರಹಕ್ಕೆ ಸಿರಿಚಂದನ ಕನ್ನಡ ಯುವ ಬಳಗ ಕಾಸರಗೋಡು ಬೆಂಬಲ ವ್ಯಕ್ತಪಡಿಸಿದೆ.
            ರಾಜ್ಯಮಟ್ಟದ ಭಾಷಾ ಅಲ್ಪಸಂಖ್ಯಾಕ ಸಮಿತಿಯಲ್ಲಿ ಕನ್ನಡಿಗರನ್ನು ಪುನ: ಸೇರಿಸಬೇಕು, ಅಂಗನವಾಡಿ ಮೇಲ್ವಿಚಾರಕರಾಗಿ ಕನ್ನಡಿಗರನ್ನೇ ನೇಮಿಸಬೇಕು, ಇದಕ್ಕಾಗಿ ಸರಕಾರ ವಿಶೇಷ ಕಾನೂನು ರೂಪಿಸಬೇಕು, ಮಂಜೇಶ್ವರ ತಾಲೂಕನ್ನು ಭಾಷಾಅಲ್ಪಸಂಖ್ಯಾಕ ತಾಲೂಕೆಂದು ಘೋಷಿಸಬೇಕು, ಕನ್ನಡ ಗುಮಾಸ್ತ ಹುದ್ದೆಗಳನ್ನು ತತ್‍ಕ್ಷಣವೇ ಭರ್ತಿಗೊಳಿಸಬೇಕು ಈ ಮುಂತಾದ ಬೇಡಿಕೆಗಳನ್ನೊಡ್ಡಿ 22 ರಂದು ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ.
    ಕನ್ನಡ ವಿದ್ಯಾರ್ಥಿಗಳ ಹಾಗೂ ಯುವಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಡೆಸುವ ಈ ಧರಣಿಯಲಿ ್ಲಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳು, ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಿರಿಚಂದನ ಕನ್ನಡ ಯುವಬಳಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಮಾತ್ರವಲ್ಲದೆ ಬಳಗವು ಸಂಪೂರ್ಣ ಬೆಂಬಲವನ್ನು ಘೋಸಿದೆ.
                  ಧರಣಿ ಸತ್ಯಾಗ್ರಹ ಯಶಸ್ವಿಗೊಳಿಸಲು ಕರೆ: 
       ರಾಜ್ಯ ಭಾಷಾ ಅಲ್ಪಸಂಖ್ಯಾತ ಸಮಿತಿಯಿಂದ ಕನ್ನಡ ಪ್ರತಿನಿಧಿಯನ್ನು ಕೈಬಿಟ್ಟ ಕ್ರಮವನ್ನು ಹಿಂತೆಗೆದುಕೊಳ್ಳಬೇಕು, ಕನ್ನಡಿಗರಿಗೆ ಮೀಸಲಿರಿಸಿದ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಕ ಮಾಡಬೇಕು, ಭಾಷಾ ಅಲ್ಪಸಂಖ್ಯಾತ ಪ್ರದೇಶದ ಅಂಗನವಾಡಿಗಳಲ್ಲಿ ಮೇಲ್ವಿಚಾರಿಕೆಯರಾಗಿ ಕನ್ನಡಿರಗನ್ನು ಮೀಸಲಾತಿಯ ಮೂಲಕ ನೇಮಕಾತಿ ನಡೆಸಲು ಕಾನೂನಿನಲ್ಲಿ ತಿದ್ದುಪಡಿ ತರಬೇಕು, ಮಂಜೇಶ್ವರ ತಾಲೂಕಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿಕೊಂಡು ಜೂ.22 ರಂದು ಬೆಳಗ್ಗೆ 10 ರಿಂದ ಹೊಸ ಬಸ್ ನಿಲ್ದಾಣ ಬಳಿ ನಡೆಯಲಿರುವ ಪ್ರತಿಭಟನಾ ಸತ್ಯಾಗ್ರಹವನ್ನು ಯಶಸ್ವಿಗೊಳಿಸಲು ಕನ್ನಡ ಹೋರಾಟ ಸಮಿತಿಯ ಪದಾ„ಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
       ಕಾಸರಗೋಡು ಸಂಸದರು, ಶಾಸಕರು, ಜಿಲ್ಲಾ ಪಂಚಾಯತ್‍ನ ಕನ್ನಡ ಜನಪ್ರತಿನಿಧಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಮೊದಲಾದವರು ಭಾಗವಹಿಸಲಿರುವ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
      ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದರು. ಮಹಾಲಿಂಗೇಶ್ವರ ಭಟ್, ಎಸ್.ವಿ.ಭಟ್, ತಾರಾನಾಥ ಮಧೂರು, ಟಿ.ಶಂಕರನಾರಾಯಣ ಭಟ್, ಗುರುಪ್ರಸಾದ್ ಕೋಟೆಕಣಿ, ಸತೀಶ್ ಕೂಡ್ಲು, ಭಾಸ್ಕರ ಕಾಸರಗೋಡು ಮೊದಲಾದವರು ಸಭೆಯಲ್ಲಿ ಸಲಹೆಗಳನ್ನಿತ್ತರು.
            ಕೋಟೆಯವರ ಸಂಘದ ಬೆಂಬಲ:
      ಕಾಸರಗೋಡಿನಲ್ಲಿ ಕನ್ನಡಕ್ಕೆ ಹೊಡೆತ ಬೀಳುತ್ತಿದೆ. ಕನ್ನಡದ ನಾಶಕ್ಕಾಗಿ ನಿರಂತರವಾಗಿ ಸರಕಾರ ಷಡ್ಯಂತ್ರ ಮಾಡುತ್ತಲೇ ಬಂದಿದೆ. ಕನ್ನಡಿಗರ ಮೇಲೆ ಮಲತಾಯಿ ಧೋರಣೆ ತೋರಲಾಗುತ್ತಿದೆ. ಇದರ ವಿರುದ್ಧವಾಗಿ ಕನ್ನಡ ರಕ್ಷಣೆಗಾಗಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುವ ಎಲ್ಲ ಕನ್ನಡ ಪರ ಚಟುವಟಿಕೆಗಳಲ್ಲಿ ಕೋಟೆಯವರ ಸಂಘವು ಬೆಂಬಲಿಸಲು ತೀರ್ಮಾನಿಸಿದೆ.
ಜೂ.22 ರಂದು ಶನಿವಾರ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆಯುವ ಬೃಹತ್ ಧರಣಿ ಸತ್ಯಾಗ್ರಹದಲ್ಲಿ ಎಲ್ಲ ಕೋಟೆ ಬಂಧುಗಳು ಭಾಗವಹಿಸಬೇಕೆಂದು ಅಖಿಲ ಭಾರತ ಕೋಟೆಯವರ ಸಂಘ ಅಧ್ಯಕ್ಷ ದಾಮೋದರ ಸೂರ್ಲು, ಪ್ರಧಾನ ಕಾರ್ಯದರ್ಶಿ ತಾರಾನಾಥ ಮಧೂರು ಜಂಟಿ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.
          ಕನ್ನಡ ಜಾಗೃತಿ ಸಮಿತಿ ಬೆಂಬಲ:
     ಕಾಸರಗೋಡು: ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನ ಕನ್ನಡಿಗರ ಮೂಲಭೂತ ಸಮಸ್ಯೆ ಹಾಗು ಹಕ್ಕುಗಳ ಬಗ್ಗೆ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆಯಲು ನಾಳೆ(ಜೂ.22) ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನಾ ಸತ್ಯಾಗ್ರಹವನ್ನು ಯಶಸ್ವಿಗೊಳಿಸಲು ಕನ್ನಡ ಜಾಗೃತ ಸಮಿತಿ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಭಾಷಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಕನ್ನಡಿಗರ ಒಗ್ಗಟ್ಟನ್ನು ಪ್ರದರ್ಶಿಸಿ ಅ„ಕಾರಿಗಳಿಗೆ ಬಿಸಿ ಮುಟ್ಟಿಸಬೇಕೆಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
                                         
             ಯಶಸ್ವಿಗೊಳಿಸಲು ಬಿಲ್ಲವ ಸಂಘ ಕರೆ:
      ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಜೂನ್ 22 ರಂದು ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆಯಲಿರುವ ಪ್ರತಿಭಟನಾ ಸತ್ಯಾಗ್ರಹವನ್ನು ಯಶಸ್ವಿಗೊಳಿಸಲು ಕಾಸರಗೋಡು ಜಿಲ್ಲಾ ಬಿಲ್ಲವ ಸೇವಾ ಸಂಘದ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
   ಕಾಸರಗೋಡಿನ ಕನ್ನಡಿಗರ ಹಕ್ಕುಗಳನ್ನು ರಕ್ಷಿಸುವುದರೊಂದಿಗೆ ಭಾಷೆಯನ್ನು ಉಳಿಸುವ ಕೆಲಸ ತುರ್ತಾಗಿ ಆಗಬೇಕೆಂದು ಸಂಘ ಅಭಿಪ್ರಾಯಪಟ್ಟಿದೆ. 22 ರಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಬೇಕೆಂದು ಪದಾಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries