ಕಾಸರಗೋಡು: ವಾಚನಾ ದಿನಾಚರಣೆ ಮತ್ತು ಕಲಿಕೋಪರಣಗಳ ವಿತರಣೆ ಸಮಾರಂಭ ಪಟ್ಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬುಧವಾರ ಜರಗಿತು.
ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಉದ್ಘಾಟಿಸಿದರು. ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಎಚ್.ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಎಸ್.ವೈ.ಎಸ್. ವತಿಯಿಂದ ಕಲಿಕೋಪಕರಣಗಳ ವಿತರಣೆ ನಡೆಯಿತು. ಮುಖ್ಯ ಶಿಕ್ಷಕ ಕೆ.ಪ್ರಶಾಂತ್ ಸುಂದರ್, ರಝಾಕ್ ಸಖಾಫಿ ಕೋಟೆಕುನ್ನು, ಶಾಲಾ ನೌಕರ ಸಂಘದ ಕಾರ್ಯದರ್ಶಿ ಯು.ಪ್ರದೀಪ್ ಕುಮಾರ್, ಶಿಕ್ಷರಾದ ಎ.ಪವಿತ್ರನ್, ರಾಮಚಂದ್ರನ್ ವೆಟ್ಟರಾಡಿ ಮೊದಲಾದವರು ಉಪಸ್ಥಿತರಿದ್ದರು.