ಬದಿಯಡ್ಕ: ಮುಂಡಿತ್ತಡ್ಕ ವಿಷ್ಣುನಗರದ ಶ್ರೀಹರಿ ಬಾಲಗೋಕುಲದ ಆಶ್ರಯದಲ್ಲಿ ಯೋಗ ದಿನಾಚರಣೆ, ಅಭಿನಂದನೆ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ ಶ್ರೀಮಹಾವಿಷ್ಣು ಸಭಾಭವನದಲ್ಲಿ ಇತ್ತೀಚೆಗೆ ಜರಗಿತು.
ರಾಷ್ಟ್ರೀಯ ಸ್ವಯಂ ಸೇವಕ ಬದಿಯಡ್ಕ ತಾಲೂಕು ಸೇವಾ ಪ್ರಮುಖ್ ಮಲ್ಲೇಶ ಅವರು ಯೋಗ ದಿನಾಚರಣೆಯ ಮಹತ್ವ ಹಾಗೂ ಯೋಗಾಭ್ಯಾಸ ತರಬೇತಿಯನ್ನು ನಡೆಸಿಕೊಟ್ಟರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಮಂದಿರದ ಅರ್ಚಕ ಭಾಸ್ಕರ ಪೂಜಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರವೀಣ್ ರೈ ಬೇಳ ಭಾಗವಹಿಸಿದ್ದರು.ಭಜನಾ ಸಂಘದ ಹಿರಿಯ ಸದಸ್ಯ ರಾಮ್ ಕುಮಾರ್ ಮುಜುಕುಮೂಲೆ ಶುಭಹಾರೈಸಿದರು. ಕಳೆದ ಸಾಲಿನ ಹತ್ತನೇ ತರಗತಿ ಪರೀಕ್ಷೆಯ ಎಲ್ಲಾ ವಿಷಯಗಳಲ್ಲಿ ಎಪ್ಲಸ್ ಅಂಕಗಳನ್ನು ಪಡೆದ ಬಾಲಗೋಕುಲದ ವಿದ್ಯಾರ್ಥಿಗಳಾದ ಕು.ಅನುಪಮ ಅರಿಯಪ್ಪಾಡಿ ಹಾಗೂ ಉತ್ತಮ ಅಂಕಗಳನ್ನು ಪಡೆದ ಮಾ.ಸಂದೇಶ್ ಮುಂಡಿತ್ತಡ್ಕ, ಕು.ಯಶೋಧ ಬೀರಿಕುಂಜ ಹಾಗೂ ಕು.ಅನುಪ್ರಿಯ ಒಳಮೊಗರು ಇವರನ್ನು ಅಭಿನಂದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ಬಾಲಗೋಕುಲದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಬಾಲಗೋಕುಲದ ಶಿಕ್ಷಕರಾದ ನಿತ್ಯಪ್ರಕಾಶ್ ಸ್ವಾಗತಿಸಿ, ಮಂದಿರದ ಪ್ರಧಾನ ಕಾರ್ಯದರ್ಶಿ ಮೋಕ್ಷಿತ್ ವಂದಿಸಿದರು. ಬಾಲಗೋಕುಲದ ಸದಸ್ಯ ಸುನಿಲ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಬಾಲಗೋಕುಲದ ಸದಸ್ಯರು ಹಾಗೂ ಮಕ್ಕಳ ಹೆತ್ತವರು ಭಾಗವಹಿಸಿದರು.