ಉಪ್ಪಳ: ಬಿ.ಎಂ.ಎಸ್ ಮಂಗಲ್ಪಾಡಿ ಪಂಚಾಯತಿ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಉಪ್ಪಳ ಅಯ್ಯಪ್ಪ ಮಂದಿರದ ಪರಿಸರದಲ್ಲಿ ನಡೆಯಿತು.
ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸನ್ ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ ಜೆರಿ ಡಿ ಸೋಜಾ ಕಯ್ಯಾರ್ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ವಲಯ ಕಾರ್ಯದರ್ಶಿ ರಾಘವೇದ್ರ.ಪಿ. ಶುಭಾಂಶನೆಗೈದರು. ಐತ್ತಪ್ಪ ನಾರಾಯಣಮಂಗಲ ಸಮಾರೋಪ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಕಿಶೋರ ಆಚಾರ್ಯ ಸ್ವಾಗತಿಸಿ, ಜನಾರ್ಧನ ವಂದಿಸಿದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಚಂದ್ರಶೇಖರ.ಯಂ, ಉಪಾಧ್ಯಾಕ್ಷರಾಗಿ ಬಾಲನ್, ಜೆರಿ ಡಿ ಸೋಜಾ, ಕಾರ್ಯದರ್ಶಿಯಾಗಿ ಸೂರ್ಯ, ಜೊತೆ ಕಾರ್ಯದರ್ಶಿಗಳಾಗಿ ಕಿಶೋರ ಆಚಾರ್ಯ, ನಳಿನಾಕ್ಷ, ಕೋಶಾಧಿಕಾರಿಯಾಗಿ ಜನಾರ್ಧನ ಹಾಗೂ ಸದಸ್ಯರಾಗಿ ಮೋಹನ್ ದಾಸ್ ಶೆಟ್ಟಿ, ಗಣೇಶ್ ಕುಬಣೂರು, ನವೀನ ತಿಂಬರ, ರೂಪೇಶ್ ಕುಮಾರ್, ರಾಮಣ್ಣ, ಪ್ರಶಾಂತ್, ಉಮೇಶ್ ಹೇರೂರು, ಸಂಜೀವ ಇವರನ್ನು ಆಯ್ಕೆ ಮಾಡಲಾಯಿತು.