ಕುಂಬಳೆ: ಕುಂಬಳೆಯಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಬಿಜೆಪಿ ಕುಂಬಳೆ ಸಮಿತಿ ಆಗ್ರಹಿಸಿದೆ.
ಕುಂಬಳೆ ಪೇಟೆ ಪರಿಸರ ಹಾಗು ಕುಂಬಳೆ ಗ್ರಾಮ ಪಂಚಾಯತಿ ವ್ಯಾಪ್ತಿಗೊಳಪಟ್ಟಿರುವ ಪ್ರದೇಶಗಳಲ್ಲಿ ಕಳೆದ 3 ತಿಂಗಳಿಂದ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಇದನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಕುಂಬಳೆ ಬಿಜೆಪಿ ಪಂಚಾಯತಿ ಜನಪ್ರತಿನಿಧಿಗಳು ಕುಂಬಳೆ ನೀರು ಸರಬರಾಜು ಇಲಾಖೆಯ ಅಧಿಕಾರಿಯಾದ ಪದ್ಮನಾಭ ಅವರಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಕೆ.ರಮೇಶ್ ಭಟ್ ಮೊದಲಾದವರಿದ್ದರು.