HEALTH TIPS

ಶಾಲೆಗಳ ಸುತ್ತಮುತ್ತ ಜಂಕ್ ಫುಡ್ ಗಳ ಜಾಹೀರಾತು ನಿಷೇಧಿಸಿ: ಎಫ್ ಎಸ್ ಎಸ್ ಎ ಐ

   
     ನವದೆಹಲಿ: ಅನಾರೋಗ್ಯಕರ ಜಂಕ್ ಫುಡ್  ಜಾಹೀರಾತುಗಳನ್ನು ಶಾಲಾ ಆವರಣದ ಸುತ್ತಮುತ್ತ ಪ್ರಚಾರ ಮಾಡಬಾರದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ ಎಸ್ ಎಸ್ ಎ ಐ) ಶಿಫಾರಸು ಮಾಡಿದೆ.
     ಶಾಲಾ ಮಕ್ಕಳಿಗೆ ಗುಣಮಟ್ಟದ ಆರೋಗ್ಯಯುತ ಆಹಾರ ನೀಡಬೇಕು ಎಂದು ಪ್ರೋತ್ಸಾಹಿಸುವ ದೃಷ್ಟಿಯಿಂದ ಅನಾರೋಗ್ಯಕರ ಜಾಹೀರಾತುಗಳನ್ನು ಪ್ರದರ್ಶಿಸಬಾರದು ಎಂದು ಹೇಳಿದೆ.
     ಎಫ್ ಎಸ್ ಎಸ್ ಎ ಐ ಯ ಮುಖ್ಯ ಕಾರ್ಯಕಾರಿ ಅಧಿಕಾರಿ ಪವನ್ ಕುಮಾರ್ ಅಗರ್ವಾಲ್, ಈ ಕುರಿತು ಕರಡು ವರದಿ ತಯಾರಿಸಲಾಗಿದ್ದು ಶಾಲೆಗಳಲ್ಲಿ ಮಕ್ಕಳಿಗೆ ಪೌಷ್ಠಿಕಾಂಶಭರಿತ ಪೂರ್ಣಪ್ರಮಾಣದ ಆಹಾರವನ್ನು ನೀಡಬೇಕಾಗದ ಕುರಿತು ವರದಿಯನ್ನು ಆರೋಗ್ಯ ಸಚಿವಾಲಯಕ್ಕೆ ಅನುಮೋದನೆಗೆ ಕಳುಹಿಸಲಾಗಿದೆ ಎಂದರು.
     ಶಾಲಾ ಆವರಣದ ಸುತ್ತಮುತ್ತ 50 ಮೀಟರ್ ಸರಹದ್ದಿನಲ್ಲಿ ಅನಾರೋಗ್ಯಕರ ಆಹಾರಗಳಿಗೆ ಸಂಬಂಧಪಟ್ಟ ಜಾಹೀರಾತುಗಳನ್ನು ಪ್ರಚಾರ ಮಾಡಬಾರದು ಎಂದು ನಾವು ಪ್ರಸ್ತಾಪ ಸಲ್ಲಿಸಿದ್ದೇವೆ. 2015ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದಲ್ಲಿ ಶಾಲಾ ಆವರಣ ಸುತ್ತಮುತ್ತ ಎಂತಹ ಆಹಾರಗಳ ಜಾಹೀರಾತುಗಳನ್ನು ಪ್ರಚಾರ ಮಾಡಬೇಕೆಂದು ಆಹಾರ ಪ್ರಾಧಿಕಾರಿಗಳು ನಿಯಮ ಹೊರಡಿಸಬೇಕು ಎಂದು ಹೇಳಿತ್ತು. ಅದನ್ನು ಆಹಾರ ನಿಯಂತ್ರಣ ಪ್ರಾಧಿಕಾರ ಮುಂದುವರಿಸಲು ನಿರ್ಧರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries