ಕಾಸರಗೋಡು: ಒಲಿಂಪಿಕ್ಸ್ ದಿನಾಚರಣೆಗೆ ಜಿಲ್ಲೆಯಲ್ಲಿ ವೈಭವಯುತವಾಗಿ ಶನಿವಾರ ಚಾಲನೆಗೊಂಡಿತು.
ಜಿಲ್ಲಾ ಕ್ರೀಡಾ ಮಂಡಳಿ ವತಿಯಿಂದ ಜರುಗುವ ಸಮಾರಂಭ ಅಂಗವಾಗಿ ಪಿಲಿಕೋಡ್ ಗ್ರಾಮಪಂಚಾಯತ್ ನ ಕಾಲಿಕಡವು ಮೈದಾನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕ್ರೀಡಾ ಸ್ಪರ್ಧೆಗಳು ನಡೆದುವು. ಬಾಸ್ಕೆಟ್ ಬಾಲ್, ವೂಷು, ಕಳರಿಪಯಟ್, ಫುಟ್ಬಾಲ್, ವಾಲಿಬಾಲ್ ಇತ್ಯಾದಿ ಪಂದ್ಯಾಟಗಳು ಜರುಗಿದುವು.
ಮಂಡಳಿ ಜಿಲ್ಲಾ ಅಧ್ಯಕ್ಷ ಹಬೀಬ್ರಹಮಾನ್ ಉದ್ಘಾಟಿಸಿದರು. ರಾಜ್ಯ ಕ್ರೀಡಾ ಮಂಡಳಿ ಸದಸ್ಯ ಟಿ.ವಿ.ಬಾಲನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಿ.ಪಿ.ಅಶೋಕನ್, ಸಿಬ್ಬಂದಿ, ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.
ಸಮಾರಂಭ ಅಂಗವಾಗಿ ಇಂದು(ಜೂ.23) ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಒಲಿಂಪಿಕ್ಸ್ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಉಪಜಿಲ್ಲಾ ಮಟ್ಟದ ಸ್ಪರ್ಧೆಗಳ ವಿಜೇತರಿಗಾಗಿ ಈ ಸ್ಪರ್ಧೆ ಜರುಗಲಿದೆ. ಇಂದು(ಜೂ.23) ಬೆಳಗ್ಗೆ 9 ಗಂಟೆಗೆ ತ್ರಿಕರಿಪುರ ಬಸ್ ನಿಲ್ದಾಣ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಒಲಿಂಪಿಕ್ಸ್ ಕ್ರೀಡಾ ಜ್ಯೋತಿ ಪರ್ಯಟನೆ ಆರಂಭಗೊಳ್ಳಲಿದೆ. ಶಾಸಕ ಎಂ.ರಾಜಗೋಪಾಲನ್ ಸಮಾರಂಭ ಉದ್ಘಾಟಿಸುವರು. ಮಾಜಿ ಭಾರತೀಯ ಕ್ರೀಡಾಪಟು ಎಂ.ಸುರೇಶ್ ಕ್ರೀಡಾಜ್ಯೋತಿ ಪಡೆದುಕೊಳ್ಳುವರು. ಕ್ರೀಡಾಮಂಡಳಿ ಜಿಲ್ಲಾ ಸಮಿತಿ ಅಧ್ಯಕ್ಷ ಹಬೀಬ್ ರಹಮಾನ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಮುಖ್ಯ ಅತಿಥಿಯಾಗಿರುವರು. ತ್ರಿಕರಿಪುರ, ನಡಕ್ಕಾವ್, ಕಾಲಿಕ್ಕಡವು, ಚೆರುವತ್ತೂರು, ನೀಲೇಶ್ವರ, ಕಾ?ಂಗಾಡ್, ಮಡಿಯನ್,ಪಾಲಕುನ್ನು, ಮೇಲ್ಪರಂಬ, ಚಂದ್ರಗಿರಿ, ಜಂಕ್ಷನ್ ಪ್ರದೇಶಗಳಲ್ಲಿ ಕ್ರೀಡಾಜ್ಯೋತಿಗೆ ಸ್ವಾಗತ ನೀಡಲಾಗುವುದು. ಸಂಜೆ 5 ಗಂಟೆಗೆ ಕಾಸರಗೋಡು ನೂತನ ಬಸ್ ನಿಲ್ದಾಣಬಳಿ ಜರುಗುವ ಸಮಾರೋಪ ಸಮಾರಂಭವನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಟಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಕಣ್ನೂರು ಡಿ.ಐ.ಜಿ. ಕೆ.ಸೇತುಮಾಧವನ್ ಮುಖ್ಯ ಅತಿಥಿಯಾಗಿರುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ಬಹುಮಾನ ವಿತರಿಸುವರು.