ಕುಂಬಳೆ: ಕುಂಬಳೆ ಪಂಚಾಯತಿ ವ್ಯಾಪ್ತಿಯ ಬಂಟ ಸಮುದಾಯದ ವಿದ್ಯಾರ್ಥಿಗಳಲ್ಲಿ ಕಳೆದ ಸಾಲಿನಲ್ಲಿ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಎಲ್ಲಾ ಪಠ್ಯಗಳಲ್ಲೂ ಎ ಪ್ಲಸ್ ಗ್ರೇಡ್ ಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಕುಂಬಳೆ ಫಿರ್ಕಾ ಬಂಟರ ಸಂಘದ ವತಿಯಿಂದ ಭಾನುವಾರ ಗೌರವಿಸಲಾಯಿತು.
ಉಜಾರು ನಿವಾಸಿ, ಕುಂಬಳೆಯ ಹಿರಿಯ ಛಾಯಾ ಗ್ರಾಹಕ ಹರೀಶ್ ಆಳ್ವ-ಉಷಾ ದಂಪತಿಗಳ ಪುತ್ರ ಸಾತ್ವಿಕ್ ಆಳ್ವ ಹಾಗೂ ನಾರಾಯಣಮಂಗಲ ನಿವಾಸಿ ದಿ.ರಾಮಪ್ರಸಾದ್ ಶೆಟ್ಟಿ-ಗೀತಾ ಆರ್ ಶೆಟ್ಟಿ ದಂಪತಿಗಳ ಪುತ್ರ ತೇಜಸ್ವಿ ಶೆಟ್ಟಿ ಇವರನ್ನು ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಮತ್ತು ಪದಾಧಿಕಾರಿಗಳು ಮನೆಗಳಿಗೆ ತೆರಳಿ ಗೌರವಿಸಿದರು.