ಕಾಸರಗೋಡು: ಉದ್ಘಾಟನೆಗೆ ಸಿದ್ಧವಾಗಿರುವ ಕಾಸರಗೋಡು ಮೀನುಗಾರಿಕೆ ಸ್ಟೇಷನ್ ನಲ್ಲಿ ಸೂಕ್ತ ಪ್ರಮಾಣದಲ್ಲಿ ಹುದ್ದೆಗಳನ್ನು ಭರ್ತಿಗೊಳಿಸಿ, ಶೀಘ್ರದಲ್ಲಿ ಚಟುವಟಿಕೆ ಆರಂಭಿಸುವಂತೆ ಮೀನುಗಾರರ ಸಂಘಟನೆಗಳ ಪ್ರತಿನಿಧಿಗಳು, ಬೋಟು ಮಾಲೀಕರ ಪ್ರತಿನಿಧಿಗಳು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಟ್ರೋಲಿಂಗ್ ನಿಷೇಧ ಸಂಬಂಧ ನಡೆದ ಸಭೆಯಲ್ಲಿ ಅವರು ಈ ಬೇಡಿಕೆ ಮುಂದಿರಿಸಿದ್ದಾರೆ.
ಟ್ರೋಲಿಂಗ್ ನಿಷೇಧ ಸಂಬಂಧ ಮೀನುಗಾರರ ಬದುಕಿಗೆ ಮತ್ತು ಆಸ್ತಿಗೆ ಸಂರಕ್ಷಣೆ ಒದಗಿಸಬೇಕು. ಈ ನಿಟ್ಟಿನಲ್ಲಿ ಮೀನುಗಾರಿಕೆ ಟಾಣೆಯ ಅಗತ್ಯ ತೀವ್ರವಾಗಿದೆ ಎಂದವರು ತಿಳಿಸಿದರು.
ಸೂಕ್ತ ಪ್ರಮಾಣದಲ್ಲಿ ಸಿಬ್ಬಂದಿ ನೇಮಕಾತಿ ನಡೆಯದೇ ಇರುವುದು ಸ್ಟೇಷನ್ ಉದ್ಘಾಟನೆ ವಿಳಂಬಗೊಳ್ಳುವುದಕ್ಕೆ ಕಾರಣ ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕ ಸಭೆಯಲ್ಲಿ ತಿಳಿಸಿದರು.
ಟ್ರಾಲಿಂಗ್ ನಿಷೇಧ ಅವಧಿಯಲ್ಲಿ ಕರ್ನಾಟಕದ ಮೀನುಗಾರರು ಕೇರಳದ ಸಮುದ್ರದಲ್ಲಿ ಮೀನುಗಾರಿಕೆ ನಡೆಸಕೂಡದು ಎಂಬ ಬಗ್ಗೆ ಆದೇಶ ಈಗಾಗಲೇ ನೀಡಲಾಗಿದೆ ಎಂದು ಕರ್ನಾಟಕ ಸರಕಾರ ಕಾಸರಗೋಡು ಮೀನುಗಾರಿಕೆ ಸಹಯಕ ನಿರ್ದೇಶಕರಿಗೆ ಪತ್ರಮೂಲಕ ತಿಳಿಸಿದೆ. ಮಂಜೆಶ್ವರ ವಲಯದ ಮೀನುಗಾರರು ಈ ವಿಚಾರದಲ್ಲಿ ಹೆಚ್ಚುಗಮನ ಹರಿಸಬೇಕು. ಮೀನುಗಾರಿಕೆ ಬೋಟುಗಳಿಗೆ ಪರವಾನಗಿ ಕಡ್ಡಾಯವಾಗಿದೆ. ನಿಗದಿತ ಶುಲ್ಕ ಪಾವತಿಸಿ ಪರವಾನಗಿ ನವೀಕರಿಸಬೇಕು. ಮೀನುಗಾರಿಕೆಗೆ ತೆರಳುವ ದೋಣಿಗಳಲ್ಲಿ ಜೀವ ರಕ್ಷಣೆಗೆ ಪರಿಕರಗಳು ಇರುವುದನ್ನು ಖಚಿತಪಡಿಸಕೊಳ್ಳಬೇಕು ಎಂದು ಸಭೆ ಸಲಹೆಮಾಡಿದೆ.
ಕಾಸರಗೋಡು ಹಾರ್ಬರ್ ನಲ್ಲಿ ಮರಳ ದಿಬ್ಬಕ್ಕೆ ಡಿಕ್ಕಿಯಾಗಿ ಬೋಟುಗಳು ಹಾನಿಗೀಡಾಗಿವೆ. ಮರಳನ್ನು ತೆರವುಗೊಳಿಸುವ ತುರ್ತು ಕ್ರಮಕೈಗೊಳ್ಳುವಂತೆ ತಾಂತ್ರಿಕ ಅನುಮತಿ ನೀಡಲಾಗಿದ್ದು, ಕೇಂದ್ರ ಏಜೆನ್ಸಿಯ ವರದಿಯ ಹಿನ್ನೆಲೆಯಲ್ಲಿ ಕ್ರಮ ನಡೆಸಲಾಗುವುದು ಎಂದು ಹಾರ್ಬರ್ ಕಾರ್ಯಕಾರಿ ಅಭಿಯಂತರರು ಸಭೆಯಲ್ಲಿ ತಿಳಿಸಿದರು.
ಪುಂಜಾವಿ ಕರಾವಳಿಯಲ್ಲಿ ಅರ್ಹರಿಗೆ ಸುನಾಮಿ ಮನೆಗಳನ್ನು ಹಸ್ತಾಂತರಿಸುವ ಕ್ರಮ ಕೈಗೊಳ್ಳಲಾಗುವುದು. ಪಿಂಚಣಿನಿಧಿ ಮಂಡಳಿಯಲ್ಲಿ ವಿಮೆಯಲ್ಲಿ ಕಾರ್ಮಿಕರ ಪಾಲು ಎಂಬ ರೀತಿಯಲ್ಲಿ 100 ರೂ. ಪಾವತಿಸಬೇಕು ಎಂದು ಸಭೆ ತಿಳಿಸಿದೆ.
ಸಮುದ್ರ ಸಂರಕ್ಷಣೆ ಚಟುವಟಿಕೆಗಳ ಅಂಗವಾಗಿ ಜಿಲ್ಲೆಯ ತೈಕಡಪ್ಪುರಂ ಕೇಂದ್ರವಾಗಿಸಿ ಯಾಂತ್ರಿಕ ಬೋಟೊಂದನ್ನು ಬಾಡಿಗೆಗೆ ಪಡೆದುಕೊಂಡು ಸಂಚಾರ ನಡೆಸಲಾಗುತ್ತಿದೆ. ಇನ್ನೊಂದು ದೋಣಿಯನ್ನೂ ಸಂರಕ್ಷಣೆಯನಿಟ್ಟಿನಲ್ಲಿ ಮಂಜೂರುಮಾಡುವಂತೆ ಸಭೆ ಮೀನುಗರಿಕೆ ಸಹಾಯಕ ನಿರ್ದೇಶಕರಿಗೆ ಮನವಿಮಾಡಿದೆ. ಇದು ಲಭಿಸಿದರೆ ಕಾಸರಗೋಡು ಹಾರ್ಬಕೇರ್ಂದ್ರೀಕರಿಸಿ ಚಟುವಟಿಕೆ ನಡೆಸಲಿದೆ ಎಂದು ತಿಳಿಸಲಾಯಿತು.
ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕೆ ಸಹಾಯಕನಿರ್ದೇಶಕಿ ಕೆ.ಅಜಿತಾ ವರದಿ ವಾಚಿಸಿದರು. ಮೀನುಗಾರರ ಸಂಘಟನೆಗಳ ಪ್ರತಿನಿಧಿಗಳಾದ ನ್ಯಾಯವಾದಿ ಯು.ಎಸ್.ಬಾಲನ್, ಆರ್.ಗಂಗಧರನ್, ಕಾಟ್ಟಾಡಿಕುಮಾರನ್, ಮುತ್ತನ್ಕಣ್ಣನ್, ಕೆ.ಮಾಧವನ್, ಷಾಹುಲ್ಹಮೀದ್ ಬಂದ್ಯೋಡ್, ಅಬ್ದುಲ್ಕರೀಂ, ಪಿ.ವಿ.ರಮೇಶ್, ಅಬ್ದುಲ್ ರಹಮಾನ್ ಕೆ.ಎಂ.ಕೆ., ಮೀನುಗಾರಿಕೆ ಸಹಾಯಕ ನಿರ್ದೇಶಕ ಪಿ.ವಿ.ಸತೀಶ್ , ಕರಾವಳಿ ಪೊಲೀಸ್ ಇನ್ಸ್ ಪೆಕ್ಟರ್ ಅಸ್ವಿನ್ ಹಾರ್ಬರ್ ಕಾರ್ಯಕಾರಿ ಇಂಇಜಿನಿಯರ್ ರಾಜೀವ್ ಎಂ., ಮತ್ಯ್ಸಪೆಡ್ ಜಿಲ್ಲ ಮೆನೆಜರ್ ಕೆ.ಎಚ್.ಷರೀಫ್ ಮೊದಲಾದವರು ,ವಿವಿಧ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.