ಮುಳ್ಳೇರಿಯ: ಇಲ್ಲಿನ ಕುಟುಂಬ ಆರೋಗ್ಯ PsÉೀಂದ್ರದಲ್ಲಿ ಸ್ತುತ್ಯರ್ಹ ಸೇವೆ ಸಲ್ಲಿಸಿದ ಆರೋಗ್ಯ ಪರಿವೀಕ್ಷಕ (ಇನ್‍ಚಾರ್ಜ್) ಸುರೇಶ್ ಕುಮಾರ್ ಅಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡು ತೆರಳುತ್ತಿದಾರೆ.
ಆರೋಗ್ಯ ಪ್ರತಿರೋಧ ಕಾರ್ಯಕ್ರಮದ ಅಂಗವಾಗಿ ಶಾಲೆ, ಕಾಲೇಜು, ಪೊಲೀಸ್ ಠಾಣೆ, ಕುಂಬಳೆ, ಉಪ್ಪಳ ಮೊದಲಾದ ಪ್ರದೇಶಗಳ ತೀರ ಪ್ರದೇಶ, ಪ್ರೀ-ವೆಟ್ರಿಕ್ ಹಾಸ್ಟೆಲ್, ಸಮುದಾಯ ಆರೋಗ್ಯ ಕೇಂದ್ರ, ಪಂಚಾಯಿತಿ ಸಭಾಂಗಣ, ವ್ಯಾಪಾರಿ ಭವನ, ಕುಟುಂಬ ಆರೋಗ್ಯ ಕೇಂದ್ರ, ನಿರಂತರ ಕಲಿಕಾ ಕೇಂದ್ರ, ಅಂಗನವಾಡಿ, ವಾಚನಾಲಯ, ಕ್ಲಬ್ಬುಗಳು ಮೊದಲಾದ ಕಡೆಗಳಲ್ಲಾಗಿ ಸುಮಾರು 402 ಆರೋಗ್ಯ ತರಗತಿಗಳನ್ನು ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉತ್ತಮ ಸಂಘಟಕನೂ, ತರಬೇತುದಾರನೂ ಆಗಿರುವ ಇವರು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ, ರಾಜ್ಯ ಸರ್ಕಾರದ ಆದ್ರ್ರ ಯೋಜನೆ ಮೊದಲಾದವನ್ನು ಜ್ಯಾರಿಗೊಳಿಸುವಲ್ಲಿ ಶಿಕ್ಷಕರು, ಕಾಲೇಜು ಶಾಲೆಯ ವಿದ್ಯಾರ್ಥಿಗಳು, ಎನ್‍ಎಸ್‍ಎಸ್ ಸ್ವಯಂಸೇವಕರು, ರೆಡ್ ಕ್ರಾಸ್, ವಿದ್ಯಾರ್ಥಿ ಪೊಲೀಸ್, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮೊದಲಾದವರಿಗೆ ತರಬೇತಿ ನೀಡಿರುತ್ತಾರೆ.
ಕ್ಯಾನ್ಸರ್ ಮುಕ್ತ ಪಂಚಾಯಿತಿಯನ್ನಾಗಿಸಲು 4500 ಕೈಪಿಡಿಯನ್ನು ಸ್ವಯಂ ತಯಾರು ಮಾಡಿ ಆಶಾ ಕಾರ್ಯಕರ್ತರ ಮೂಲಕ ಜನರಿಗೆ ನೀಡುವ ಮೂಲಕ ಹೃದಯಾಘಾತ , ಮಲೇರಿಯ, ಡೆಂಗಿಜ್ವರ, ಇಲಿಜ್ವರ, ರಕ್ತದೊತ್ತಡ, ಪೋಲಿಯೋ, ಟೈಫೋಯ್ಡ್, ಮೀಸಿಲ್ಸ್, ಏಯ್ಡ್ಸ್, ರುಬೆಲ್ಲಾ, ಕ್ಷಯ, ಕುಷ್ಠ ಮೊದಲಾದ ರೋಗಗಳ ಬಗ್ಗೆ ತರಗತಿಯನ್ನು ನಡೆಸಿದ್ದಾರೆ.
ವಿವಿಧ ವೈದ್ಯಕೀಯ ಶಿಬಿರಗಳು, ಹಿಂ.ಜಾತಿ-ವಿಭಾಗ ವಿಭಾಗದ ಶಿಕ್ಷಣ ಪೂರ್ತಿಗೊಳಿಸದವರ ಸರ್ವೆ, ಕ್ಯಾನ್ಸರ್, ರಕ್ತದೊತ್ತಡ, ಕ್ಷಯ, ಕುಷ್ಠ, ವಿಕಲZsÉೀತನರ ಸರ್ವೆಗಳ ಮೂಲಕ ಯಶಸ್ವಿಯಾದವರು.