ಮಂಜೇಶ್ವರ: ಮೀಯಪದವು ಸೇವಾ ಸಹಕಾರಿ ಬ್ಯಾಂಕ್‍ನ ವತಿಯಿಂದ ಬ್ಯಾಂಕ್ ಆವರಣದಲ್ಲಿ ಹಸಿರು ಸಹಕಾರ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಕಾರ್ಯಕ್ರಮದ ಅಂಗವಾಗಿ ಗೇರು ಬೀಜ ಸಸಿಗಳನ್ನು ವಿತರಿಸಲಾಯಿತು. ಅಧ್ಯಕ್ಷ ಡಿ.ಹರೀಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮಜಿಬೈಲು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಗೋವಿಂದ ಹೆಗ್ಡೆ, ಬ್ಯಾಂಕಿನ ಉಪಾಧ್ಯಕ್ಷ ನೆಬಿಸತ್ ಮಿಸ್ರಿಯ, ಕೃಷಿಕ ಉಮ್ಮರ್, ಡಾ.ಶಿವನಾರಾಯಣ ಭಟ್ ಮತ್ತು ನಿರ್ದೇಶಕರಾದ ಚಂದ್ರಶೇಖರ, ಶೋಭಾ, ಡೆನಿಸ್ ಮೊಂತೇರೊ, ಮಹಮ್ಮದ್ ಅಶ್ರಫ್, ಮಾರ್ಸೆಲ್ ಮೊಂತೇರೊ, ಅಬೂಬಕ್ಕರ್‍ಸಿದ್ದಿಕ್, ವಿಜಯಲಕ್ಷ್ಮೀ ಟಿ.ಆರ್. ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ವಂದಿಸಿದರು.