ಮಂಜೇಶ್ವರ: ಮುನ್ನಿಪ್ಪಾಡಿ ಭಗತ್ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ದಿ.ನವೀನ್ ಆಳ್ವರ ಸ್ಮರಣಾರ್ಥ ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೀಯಪದವಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮ ಶಾಲಾ ಸಭಾಂಣದಲ್ಲಿ ಇತ್ತೀಚೆಗೆ ಜರಗಿತು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಸಲಹೆಗಾರ ಶ್ರೀಧರ ರಾವ್.ಆರ್.ಎಂ, ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ವಿದ್ಯಾವರ್ಧಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ತಿಮ್ಮಪ್ಪ ಭಟ್, ಮಾತೃಸಂಘದ ಅಧ್ಯಕ್ಷೆ ಸೌಮ್ಯ ಪ್ರಕಾಶ್, ಶಾಲಾ ಪ್ರಧಾನ ಅಧ್ಯಾಪಕ ಸುಧಾಕರ.ವಿ ಹಾಗೂ ಭಗತ್ ಫ್ರೆಂಡ್ಸ್‍ನ ಹಿರಿಯ ಸದಸ್ಯ ಸುಬ್ಬಣ್ಣ ಆಳ್ವ ಉಪಸ್ಥಿತರಿದ್ದರು. ಕ್ಲಬ್ಬಿನ ಸದಸ್ಯ ಗಿರೀಶ್ ಮುನ್ನಿಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರಘುವೀರ್ ರಾವ್ ಸ್ವಾಗತಿಸಿ, ಭಗತ್ ಫ್ರೆಂಡ್ಸ್ ಕ್ಲಬ್ ಸದಸ್ಯ ಕಿಶೋರ್ ವಂದಿಸಿದರು. ಕಾರ್ಯಕ್ರಮವನ್ನು ಜಗದೀಶ್ ಪ್ರತಾಪ್‍ನಗರ ನಿರೂಪಿಸಿದರು.