HEALTH TIPS

ನಾಳೆ ಕೃಷಿಕ ಗುಂಪಿನೊಂದಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಪೂರ್ವ ಸಮಾಲೋಚನೆ


    ನವದೆಹಲಿ:  ಮಹಾರಾಷ್ಟ್ರದಂತಹ ಕೆಲ ರಾಜ್ಯಗಳಲ್ಲಿ ಮುಂಗಾರು ವಿಳಂಬವಾಗಿದ್ದು, ಬರ ಪರಿಸ್ಥಿತಿ ತೀವ್ರಗೊಂಡಿರುವ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ನಾಳೆ (ಮಂಗಳವಾರ) ಕೃಷಿಕ ಗುಂಪು ಹಾಗೂ ಕೃಷಿ ತ ಜ್ಞ ರೊಂದಿಗೆ ಮೊದಲ ಬಜೆಟ್ ಪೂರ್ವ ಸಮಾಲೋಚನೆ ನಡೆಸಲಿದ್ದಾರೆ.
    ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಎರಡನೇ ಅವಧಿಯಲ್ಲಿ ಕಳೆದ ತಿಂಗಳ ವಿತ್ತ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಿರ್ಮಲಾ ಸೀತಾರಾಮನ್ ನಡೆಸುತ್ತಿರುವ ಮೊದಲ ಸಂವಾದ ಇದಾಗಿದೆ.  ಸೀತಾರಾಮನ್ ಜುಲೈ 5 ರಂದು ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ.
     ರೈತರ ಆದಾಯ ದ್ವಿಗುಣ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ಮಾರ್ಗೋಪಾಯಗಳ ಕುರಿತಂತೆ ಕೃಷಿ ತ ಜ್ಞ ರು ಹಾಗೂ ವಿವಿಧ ಕೃಷಿ ಸಂಘಟನೆಗಳಿಂದ ಮಾಹಿತಿಯನ್ನು ಸಚಿವರು ಪಡೆಯಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
    ಮೀನುಗಾರಿಕೆ, ಕುಕ್ಕುಟ ಉದ್ಯಮ ಹಾಗೂ ಪಶುಪಾಲನೆ  ಮತ್ತಿತರ ಕೃಷಿ ಚಟುವಟಿಕೆಗಳ ಪ್ರಗತಿ ಕಡೆಗೆ ಹೆಚ್ಚಿನ ಗಮನ ಹರಿಸಲಿದ್ದಾರೆ ಎನ್ನಲಾಗಿದೆ. ಪ್ರತ್ಯೇಕ ಮೀನುಗಾರಿಕಾ ಇಲಾಖೆಯನ್ನು ಸೃಷ್ಟಿಸುವುದಲ್ಲದೇ, ಕೃಷಿ ಸಂಬಂಧಿತ ವಲಯದ ಉತ್ತೇಜನಕ್ಕಾಗಿ ಕ್ಯಾಬಿನೇಟ್ ಸಚಿವರನ್ನು ನೇಮಕಗೊಳಿಸುವ ಸಾಧ್ಯತೆ ಇದೆ.
   ವಿವಿಧ ಬೇಡಿಕೆಗಳನ್ನು ಪಟ್ಟಿಮಾಡಿ ಅನೇಕ ಕೃಷಿಕ ಗುಂಪುಗಳು ಈಗಾಗಲೇ  ಹಣಕಾಸು  ಇಲಾಖೆಗೆ ಸಲ್ಲಿಸಿವೆ. ನಂತರ ನಿರ್ಮಲಾ ಸೀತಾರಾಮನ್, ಉದ್ಯಮಕ್ಕೆ ಸಂಬಂಧಿಸಿದ ಪ್ರಮುಖ ಗುಂಪಿನೊಂದಿಗೆ  ಬಜೆಟ್  ಪೂರ್ವ ಸಮಾಲೋಚನೆ ನಡೆಸಲಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries