ಕಾಸರಗೋಡು: ಜಿಲ್ಲೆಯಲ್ಲಿ ನೂತನವಾಗಿ ಆರಂಭಿಸುವ, ಅರ್ಧದಲ್ಲೇ ಸೇವೆ ಮೊಟಕುಗೊಳಿಸಿರುವ ೧೫ ಕೇಂದ್ರಗಳಲ್ಲಿ ಅಕ್ಷಯ ಕೇಂದ್ರ ಆರಂಭಿಸುವ ನಿಟ್ಟಿನಲ್ಲಿ ಅರ್ಜಿ ಕೋರಲಾಗಿದೆ. ಮಧೂರು, ಬದಿಯಡ್ಕ ಪೇಟೆ, ಮೊಗ್ರಾಲ್ ಪುತ್ತೂರು, ಎರಿಯಾಲ್, ಕೋಟೂರು, ಕಾನತ್ತೂರು, ಮವ್ವಾರ್, ಬಾಡೂರು, ಶಶಿಗೋಳಿ, ಬೇಕಲ್, ಕಳ್ಳಾರ್, ಪಾಂಡಿ, ಎಡಚ್ಚಕೈ, ಮುಳಕ್ಕೋಂ, ಜೋಡುಕಲ್ಲು ಪ್ರದೇಶಗಳಲ್ಲಿ ಈ ಕೇಂದ್ರ ಆರಂಭಿಸಬೇಕಿದೆ. ಅರ್ಜಿದಾರರು ಪಿಯುಸಿ/ಪ್ಲಸ್-ಟು/ತತ್ಸಮಾನ ಶಿಕ್ಷಣ ಹೊಂದಿದವರಾಗಿರಬೇಕು. ಕಂಪ್ಯೂಟರ್ ಜ್ಞಾ ನ ಹೊಂದಿರುವವರು, ೧೮ ವರ್ಷಪ್ರಾಯ ಪೂರ್ತಿಯಾದವರಾಗಿರಬೇಕು. ಹೆಚ್ಚುವರಿ ಶಿಕ್ಷಣ ಹೊಂದಿರುವವರಿಗೆ, ಮಹಿಳೆಯರಿಗೆ, ಪರಿಒಶಿಷ್ಟ ಜಾತಿ-ಪಂಗಡದವರಿಗೆ ಸರಕಾರದ ನಿಬಂಧನೆ ಹಿನ್ನೆಲೆಯಲ್ಲಿ ಆದ್ಯತೆಯಿದೆ. ಆನ್ ಲೈನ್ ಪರೀಕ್ಷೆ , ಸಂದರ್ಶನ ಮೂಲಕ ಆಯ್ಕೆ ನಡೆಯಲಿದೆ. ಜೂ.೧೭ರಿಂದ ಜುಲೈ ೨ ವರೆಗೆ ಅರ್ಜಿ ಸಲ್ಲಿಸಬೇಕಾದ ವೆಬ್ ಸೈಟ್: http://aesreg.kemetric.com/ ಸಂಪರ್ಕಿಸಬಹುದು.
ಆನ್ ಲೈನ್ ಅರ್ಜಿಯ ಪ್ರಿಂಟ್, ಡೈರೆಕ್ಟರ್ ಕೇರಳ ಸ್ಟೇಟ್ ಐ.ಟಿ.ಮಿಷನ್, ತಿರುವನಂತಪುರಂ ಎಂಬಹೆಸರಲ್ಲಿ ಬದಲಿಸಬಹುದಾದ ರಾಷ್ಟ್ರೀಕೃತ ಬ್ಯಾಕ್ ಶಾಖೆಯಿಂದ ಪಡೆದ ೭೫೦ ರೂ.ನ ಡಿಡಿ ಸಹಿತ ಜುಲೈ ೬ರ ಮುಂಚಿತವಾಗಿ ಕಾಸರಗೋಡು ತಾಯಲಂಗಾಡಿಯಲ್ಲಿರುವ ಅಕ್ಷಯ ಜಿಲ್ಲಾ ಪ್ರೋಜೆಕ್ಟ್ ಕಚೇರಿಗೆ ಸಲ್ಲಿಸಬೇಕು. ಮಾಹಿತಿಗೆ ವೆಬ್ ಸೈಟ್: www.akshaya.kerala.gov.in ದೂರವಾಣಿ: ೦೪೯೯೪-೨೩೦೦೪೫.