ಕುಂಬಳೆ: ಸ್ಪರ್ಧಾತ್ಮಕ ತಾಂತ್ರಿಕ ಯುಗದಲ್ಲಿ ಸ್ಪರ್ಧಾತ್ಮಕ ಮನೋಭಾವ ಮಕ್ಕಳಲ್ಲಿ ಬೆಳೆಸಲು ಮಾಹಿತಿ ತಂತ್ರಜ್ಞಾನವು ಪ್ರಯೋಜನಕಾರಿ
ಎಂದು ಧರ್ಮತ್ತಡ್ಕ ಶಾಲಾ ಮುಖ್ಯೋಪಾಧ್ಯಾಯ ಎನ್. ರಾಮಚಂದ್ರ ಭಟ್ ತಿಳಿಸಿದರು.
ಶಾಲಾ ಲಿಟಲ್ ಕೈಟ್ಸ್ ಕ್ಲಬ್‍ನ್ನು ಗುರುವಾರ ಉದ್ಘಾಟಿಸಿ ಕ್ಲಬ್ ನ ಸದಸ್ಯರಿಗೆ ಶುಭ ಹಾರೈಸಿ ಅವರು ಮಾತನಾಡಿದರು. 25 ಸದಸ್ಯರಿರುವ ಕ್ಲಬ್ ಗೆ ಶಾಲಾ ಶಿಕ್ಷಕ ಈ.ಯಚ್ ಗೋವಿಂದ ಭಟ್ ಶುಭ ಹಾರೈಸಿದರು. ಕ್ಲಬ್‍ನ ಸಂಚಾಲಕ ಶಶಿಕುಮಾರ್ ಸ್ವಾಗತಿಸಿ, ಉಪಸಂಚಾಲಕ ಪ್ರದೀಪ್ ಕರುವಜೆ ವಂದಿಸಿದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಿಗೆ ಒಂದು ದಿನದ ವಿಶೇಷ ತರಬೇತಿಯನ್ನು ನೀಡಲಾಯಿತು.