HEALTH TIPS

ಮೋದಿಗಾಗಿ ಭಕ್ತರಿಂದ ಸೇವೆ- ಕುಳೂರು ಕುಟುಂಬಸ್ಥರಿಂದ ಮಧೂರು ಗಣಪತಿಗೆ ಸಹಸ್ರ ಆಪ್ಪ ಅರ್ಪಣೆ.


        ಮಧೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ವಿಜಯ ಸಾಧಿಸಿ ನರೇಂದ್ರ ಮೋದಿಯವರು ಮಗದೊಮ್ಮೆ ದೇಶದ ಪ್ರಧಾನಿಯಾಗಿ ಆಯ್ಕೆಗೊಂಡ ಪ್ರಯುಕ್ತ ಡಾ.ಗಣಪತಿ ಮತ್ತು ವಿಘ್ನರಾಜ್ ವತಿಯಿಂದ ಕುಳೂರು ಕುಟುಂಬದ ಪರವಾಗಿ ಮಧೂರು ಮಹಾಗಣಪತಿಯ ಸನ್ನಧಾನದಲ್ಲಿ ಬುಧವಾರ ಸಹಸ್ರ ಅಪ್ಪ ಸೇವೆ ನಡೆಸಲಾಯಿತು.
     ದೇಶದಾದ್ಯಂತ ಪಸರಿಸಿದ ಕೇಸರಿ ಅಲೆಯು ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ಮೋದಿಯವರನ್ನು ಎರಡನೆ ಬಾರಿಗೆ ಪ್ರಧಾನಿಯಾಗುವಂತೆ ಮಾಡಿರುವುದು ಸಂತಸ ತಂದಿದೆ. ಭಾರತದ ಅಭಿವೃದ್ಧಿ ಮತ್ತು ಭಾರತೀಯರ ನೆಮ್ಮದಿ ಪ್ರಧಾನಿಯವರ ಹೊಸ ಹೊಸ ಯೋಜನೆಗಳ ಮುಖಾಂತರ ನನಸಾಗುತ್ತಿದೆ. ನಿಸ್ವಾರ್ಥ ಮನೋಭಾವದ, ದೇಶಕ್ಕಾಗಿ ದುಡಿಯುವ, ವಿಶ್ವವನ್ನೇ ಬೆರಗು ಮೂಡಿಸಿದ ಪ್ರಧಾನಿಯ ಹೆಸರಲ್ಲಿ ಸಹಸ್ರ ಅಪ್ಪ ಸೇವೆ ಮಾಡುವ ಮೂಲಕ ಮಹಾಗಣಪತಿಯ ಪೂರ್ಣ ಅನುಗ್ರಹ ಅವರ ಮೇಲಿರಲೆಂಬ ಉದ್ದೇಶ ನಮ್ಮದು ಎಂದು ಈ ಸಂದರ್ಭದಲ್ಲಿ ವಿಘ್ನರಾಜ್ ಕುಳೂರು ಸಂತಸ ವ್ಯಕ್ತಪಡಿಸಿದರು.
     ಕುಳೂರು ಕುಟುಂಬಸ್ಥರು, ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ.ಶ್ರೀಕಾಂತ್, ಎನ್‍ಡಿಎ ಅಭ್ಯರ್ಥಿ ರವೀಶ ತಂತ್ರಿ, ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ , ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸುರೇಶ್ ಶೆಟ್ಟಿ, ಬಿಜೆಪಿ ಮಂಡಲಾಧ್ಯಕ್ಷ  ಸುಧಾಮ ಗೋಸಾಡ, ಶ್ರೀಕಾಂತ್ ನೆಟ್ಟಣಿಗೆ, ಸುಕುಮಾರ ಕುದ್ರೆಪ್ಪಾಡಿ, ಮಾಧವ ಮಾಸ್ತರ್, ಪ್ರಭಾಶಂಕರ ಮಾಸ್ತರ್, ರಾಧಾಕೃಷ್ಣ ಸೂರ್ಲು, ಧನಂಜಯ, ನವೀನ್ ನೆಟ್ಟಣಿಗೆ, ಋತಿಕ್ ಯಾದವ್, ಸುಜಾತ ತಂತ್ರಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. 
      ದೇಶದ ಸರ್ವತೋಮುಖ ಬೆಳವಣಿಗೆಗೆ ಹಗಲಿರುಳು ಸೇವೆ ಸಲ್ಲಿಸುವ ದೇಶದ ಪ್ರಧಾನಿ ಮೋದಿಯವರ ಗೆಲುವಿನ ಸಂಭ್ರಮವನ್ನು ಗಣಪತಿಗೆ ಸಹಸ್ರ ಅಪ್ಪ ಸೇವೆ ನಡೆಸುವ ಮೂಲಕ ಆಚರಿಸಿದ ಕುಳೂರು ಕುಟುಂಬದ ಅಭಿಮಾನ ಶ್ಲಾಘನೀಯ. ಈ ಸೇವೆಯಲ್ಲಿ ಜತೆಸೇರಿ ಪ್ರಧಾನಿಯವರು ಮತ್ತುದೇಶದ ಹಿತರಕ್ಷಣೆಗಾಗಿ ಮಾಡುವ ಪ್ರಾರ್ಥನೆಯಲ್ಲಿ ಶ್ರೀ ದೇವರಲ್ಲಿ ಬೇಡಿಕೊಳ್ಳುವ ಅವಕಾಶ ದೊರಕಿರುದುದು ನಮ್ಮ ಭಾಗ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಈ ಸಂದರ್ಭ ಪ್ರತಿಕ್ರಿಯಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries