ಕಾಸರಗೋಡು: ಸಿವಿಲ್ ಸರ್ವೀಸ್ ವಲಯದಲ್ಲಿ ಸೇವೆ ನಡೆಸಲು ಸಿದ್ಧರಿರುವ 25 ವರ್ಷಕ್ಕಿಂತ ಕೆಳಗಿನ ವಯೋಮಾನದ ಪದವೀಧರರಿಗೆ ಜಿಲ್ಲಾಧಿಕಾರಿ ಅವರ ಇಂಟರ್ನ್ ಶಿಪ್ ಪ್ರೋಗ್ರಾಂ ಗೆ ಜೂ.27 ವರೆಗೆ ಅರ್ಜಿ ಸಲ್ಲಿಸಬಹುದು.
ಸಿವಿಲ್ ಸರ್ವೀಸ್ ವಲಯವನ್ನು ಪ್ರವೇಶಿಸಲು ಆಸಕ್ತರಾದವರಿಗೆ ಆಡಳಿತ ವ್ಯವಸ್ಥೆಯ ಕುರಿತು ಸಮೀಪದಿಂದ ತಿಳಿದುಕೊಳ್ಳಲು ಈ ಪ್ರೋಗ್ರಾಂ ಒಂದು ಅವಕಾಶವಾಗಿದೆ. ಸರಕಾರಿ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ, ಬಡವರಿಗೆ ಸಹಾಯ ಒದಗಿಸುವುದಕ್ಕೆ, ಪದವೀಧರರ ಸಾಮಥ್ರ್ಯ ಮತ್ತು ನೂತನಚಿಂತನೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ಯೋಜನೆ ಇದಾಗಿದೆ. ನಿಗದಿತ ಮಾದರಿಯಲ್ಲಿರುವ ಅರ್ಜಿಯೊಂದಿಗೆ ಶಿಕ್ಷಣಾರ್ಹತೆಯ ಪತ್ರಗಳ ನಕಲುಗಳನ್ನು ಜೂ.27ರ ಮುಂಚಿತವಾಗಿ "ಜಿಲ್ಲಾ ಕಲೆಕ್ಟರ್, ಸಿವಿಲ್ ಸ್ಟೇಷನ್, ವಿದ್ಯಾನಗರ ಪಿ.ಒ., ಕಾಸರಗೋಡು-671123" ಎಂಬ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಫಾರಂ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಲಭ್ಯವಿದೆ. ಸಂದರ್ಶನದ ಮಾಹಿತಿ ನಂತರ ತಿಳಿಸಲಾಗುವುದು. ಮಾಹಿತಿಗೆ ದೂರವಾಣಿ: 04994-255010 ಸಂಪರ್ಕಿಸಬಹುದು.