ಬದಿಯಡ್ಕ: ನೆಕ್ರಾಜೆ ಗ್ರಾಮದ ದೇವಸ್ಥಾನವಾದ ಶ್ರೀಗೋಪಾಲಕೃಷ್ಣ ಕ್ಷೇತ್ರದ ನೂತನ ಶಿಲಾಮಯ ಗರ್ಭ ಗುಡಿಯ ನಿರ್ಮಾಣ ಕಾರ್ಯಗಳಿಗಾಗಿ ಕಾರ್ಕಳದಿಂದ ಶಿಲೆಯನ್ನು ಭಕ್ತರ ನೆರವಿನೊಂದಿಗೆ ಮೆರವಣಿಗೆ ಮೂಲಕ ಇತ್ತೀಚಿಗೆ ತರಲಾಯಿತು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಿ.ವಸಂತ ಪೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಂಕರ ನಾರಾಯಣ ಮಯ್ಯ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಗಣೇಶ ವತ್ಸ ನೆಕ್ರಾಜೆ, ಅನುವಂಶಿಕ ಮೊಕ್ತೇಸರ ನೆಕ್ರಾಜೆ ಸೀತಾರಾಮ ಶೆಟ್ಟಿ, ಸೇವಾ ಸಮಿತಿ ಅಧ್ಯಕ್ಷ ಗಂಗಾಧರ ಮಣಿಯಾಣಿ ನೆಲ್ಲಿತ್ತಲ, ರತ್ನಾಕರ ಮಾವಿನಕಟ್ಟೆ, ಗೋಪಾಲ ಭಟ್ ಕೋಳಾರಿ ಮತ್ತು ಶ್ರೀಕ್ಷೇತ್ರ ಮಹಿಳಾ ಸಂಘ ನೆಕ್ರಾಜೆ, ಶ್ರೀಗೋಪಾಲ ಕೃಷ್ಣ ಭಜನಾ ಸಂಘ ನೆಕ್ರಾಜೆ ಮತ್ತು ವಿವಿಧ ಸಂಘ ಸಂಸ್ಥೆಗಳ ಹಾಗೂ ಕ್ಲಬ್‍ಗಳ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನೆಕ್ರಾಜೆ ಶ್ರೀಗೋಪಾಲಕೃಷ್ಣ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯ ಕೆಲಸ ಸದ್ಯದಲ್ಲಿ ಪ್ರಾರಂಭವಾಗಲಿದ್ದು, ಶಿಲೆಯನ್ನು ಶ್ರೀಕ್ಷೇತ್ರಕ್ಕೆ ತಲುಪಿಸಲಾಗಿದೆ.
ಶ್ರೀ ನೆಕ್ರಾಜೆ ಕ್ಷೇತ್ರವು ಗ್ರಾಮದ ದೇವಸ್ಥಾನವಾಗಿದ್ದು ಸಂತಾನ ಗೋಪಾಲಕೃಷ್ಣ ಎಂದೇ ಖ್ಯಾತಿ ಪಡೆದಿದೆ. ಅತಿ ಶೀಘ್ರದಲ್ಲಿ ಗರ್ಭ ಗೃಹದ ಕೆಲಸವನ್ನು ಪೂರ್ತಿಗೊಳಿಸುವ ಯೋಜನೆ ಹಾಕಲಾಗಿದ್ದು ಭಕ್ತ ಜನರ ಸಹಕಾರದಿಂದ ಅದು ಸಾಧ್ಯವಾಗಲಿದೆ.
ಗಣೇಶ ವತ್ಸ ನೆಕ್ರಾಜೆ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ.