ಮಂಜೇಶ್ವರ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ತಲೇಕಳ ಕಡಂಬಾರ್‍ನ 2019-20ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ವಿಜೃಂಭಣೆಯಿಂದ ನಡೆಯಿತು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಬ್ಬಣ್ಣ ಭಂಡಾರಿ ತಲೇಕಳ ಉದ್ಘಾಟಿಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಸದಾಶಿವ ಶೆಟ್ಟಿ ಮೊರತ್ತಣೆ ಅಧ್ಯಕ್ಷತೆ ವಹಿಸಿದರು. ನಾಗಬ್ರಹ್ಮ ಪ್ರಂಡ್ಸ್ ಕ್ಲಬಿನ ಸದಸ್ಯರಾದ ರವಿರಾಜ್, ಎಸ್.ಎಂ.ಸಿ.ಸದಸ್ಯರಾದ ಅಬ್ಬಾಸ್ ಬಟ್ಟಿಪದವು ಉಪಸ್ಥಿತರಿದ್ದರು.
ಹೊಸದಾಗಿ ದಾಖಲಾತಿಗೊಂಡ ವಿದ್ಯಾರ್ಥಿಗಳನ್ನು ಬಲೂನ್, ಟೊಪ್ಪಿ ಇಟ್ಟು ಸ್ವಾಗತಿಸಲಾಯಿತು. ಕಲಿಕಾ ಕಿಟ್, ಬ್ಯಾಗ್, ಕೊಡೆ ವಿತರಿಸಲಾಯಿತು.
ನಾಗಬ್ರಹ್ಮ ಫ್ರಂಡ್ ಕ್ಲಬ್‍ನ ವತಿಯಿಂದ ಶಾಲೆಯ ಎಲ್ಲಾ ಮಕ್ಕಳಿಗೂ ನೋಟ್ಸ್ ಪುಸ್ತಕ ವಿತರಿಸಲಾಯಿತು. ಕ್ಲಬಿನ ಸದಸ್ಯರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಕರು, ಹಳೆವಿದ್ಯಾರ್ಥಿಗಳು ಭಾಗವಹಿಸಿದರು. ಮುಖ್ಯೋಪಾಧ್ಯಾಯರಾದ ರವೀಂದ್ರ ಎಂ. ಸ್ವಾಗತಿಸಿದರು. ಅಧ್ಯಾಪಿಕೆ ಬಿಫಾತಿಮ ಕಡಂಬಾರ್ ವಂದಿಸಿದರು. ಅಧ್ಯಾಪಕ ಎಂ.ಎ.ಸಿದ್ದಿಕ್ ಪಾತೂರು ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಟೀಚರ್, ಬೀವಿ ಆಯಿಷಾ ಟೀಚರ್, ಗಿರಿಜ ಸಹಕರಿಸಿದರು.