ನವದೆಹಲಿ: ಹಿಂದಿ ಭಾಷೆ ಕಡ್ಡಾಯ ಕಲಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಯುಟರ್ನ್ ಹೊಡೆದಿದೆ. ಸರ್ಕಾರದ ನಿರ್ಧಾರಕ್ಕೆ ಹಿಂದಿಯೇತರ ರಾಜ್ಯಗಳಿಂದ ಬೃಹತ್ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರವು ಶೈಕ್ಷಣಿಕ ಪಠ್ಯದಲ್ಲಿ ಮೂರು ಭಾಷೆಗಳ ಕಲಿಕೆ ಕಡ್ಡಾಯ ಎಂಬ ಷರತ್ತನ್ನು ಹಿಂಪಡೆದಿದೆ.ವಿದ್ಯಾರ್ಥಿಗಳಿಗೆ ಹಿಂದಿ ಕಡ್ಡಾಯವಾಗಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳುರಾಷ್ಟ್ರೀಯ ಶಿಕ್ಷಣ ನೀತಿಯ ಕರಡುಪ್ರತಿನಲ್ಲಿ ಪ್ರಸ್ತಾಪಿಸಿರುವ ಆಡ್-ಆನ್ ವೈಶಿಷ್ಟ್ಯದಲ್ಲಿನ ತ್ರಿಭಾಷಾ ಸೂತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದವು.ಇದು "ಹಿಂದಿ ಹೇರಿಕೆ"ಗೆ ಕೇಂದ್ರದ ಕುತಂತ್ರ ಎಂದು ಅವುಗಳು ಆರೋಪಿಸಿದ್ದವು.
ತಮಿಳುನಾಡು ಸರ್ಕಾರವು ದ್ವಿಭಾಷಾ ಸೂತ್ರವನ್ನು ಮುಂದುವರಿಸಲಿದೆ ಎಂದು ಹೇಳಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ತಮಿಳು ಭಾಷೆಯ ಸರಣಿ ಟ್ವೀಟ್ ಮಾಡಿದ್ದು "ಶಾಲೆಗಳಲ್ಲಿ ತ್ರಿಭಾಷಾ ಸೂತ್ರದ ಅರ್ಥವೇನು?ಕೇಂದ್ರ ಸರ್ಕಾರ ಹಿಂದಿ ಕಡ್ಡಾಯ ಆಗಿಸಲು ಬಯಸುತ್ತಿದೆ, ಹಿಂದಿ ಭಾಷೆ ಕಡ್ಡಾಯ ವಿಷಯವಾಗಿದ್ದರೆ ಇದು ಅವರ ಹಿಂದಿ ಹೇರಿಕೆಯ ಸಾಕ್ಷಿಯಾಗಲಿದೆ" ಅವರು ಹೇಳಿದ್ದಾರೆ. ಅಲ್ಲದೆ "ಹಿಂದಿ ಹೇರಿಕೆಯ ಮೂಲಕ ಬಿಜೆಪಿ ಸರ್ಕಾಅದ ನೈಜ ಮುಖ ಹೊರಹೊಮ್ಮುತ್ತಿದೆ" ಎಂದೂ ಚಿದಂಬರಂ ಹೇಳಿದರು.
ಏತನ್ಮಧ್ಯೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮಿಳಿನಲ್ಲೇ ಟ್ವೀಟ್ ಮಾಡಿ ಕೇಂದ್ರ ಹಿಂದಿ ಹೇರಿಕೆ ಮಾಡುತ್ತಿದೆ ಎಂಬುದು ಸುಳ್ಳು ಎಂದು ಹೇಳಿದ್ದಾರೆ.
ಇನ್ನು ಸಾಮಾಜಿಕ ತಾಣಗಳಾದ ಟ್ವಿಟ್ಟರ್, ಪೇಸ್ ಬುಕ್ ಗಳಲ್ಲಿ ""#StopHindiImposition, #TNAgainstHindiImposition ಎಂಬ ಟ್ರೆಂಡಿಂಗ್ ಪ್ರಾರಂಭವಾಗಿದೆ."ಪೂರ್ವ ಪ್ರಾಥಮಿಕ ಶಾಲೆಗಳಿಂದ 12ನೇ ತರಗತಿ ವರೆಗೆ ತ್ರಿಭಾಷಾ ಸೂತ್ರ ಅಳವಡಿಕೆ ಆಘಾತಕಾರಿಯಾಗಿದ್.ಇದು ದೇಶವನ್ನು ವಿಭಜಿಸುವ ಶಿಫಾರಸಾಗಲಿದೆ" ಎಂದು ಡಿಎಂಕೆ ಮುಖ್ಯ ಎಂಕೆ ಸ್ಟಾಲಿನ್ ಹೇಳಿದರು.