ಮಂಜೇಶ್ವರ: ಮಂಗಳೂರು - ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಡೆಸುವ ಕರ್ನಾಟಕ ಹಾಗೂ ಕೇರಳ ಕೆಎಸ್‍ಆರ್‍ಟಿಸಿ ಬಸ್‍ಗಳು ಟಿಕೆಟ್ ದರವನ್ನು ಒಮ್ಮಿಂದೊಮ್ಮೆ ಏರಿಸಿದ್ದ ವಿಚಾರವನ್ನು ಬಿಜೆಪಿ ಕೋಳ್ಯೂರು ಸಮಿತಿ ಅಧ್ಯಕ್ಷ , ಪ್ರಸಿದ್ಧ ಪತ್ರಿಕಾ ಅಂಕಣಗಾರ ಗಣೇಶ ಭಟ್ ಹಾಗೂ ಬಿಜೆಪಿ ಘಟಕದ ಪದಾಧಿಕಾರಿಗಳು ಎರಡೂ ರಾಜ್ಯಗಳ ಸಾರಿಗೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಟಿಕೆಟ್ ದರವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಸ್ ಟಿಕೆಟ್ ದರವು ಅವೈಜ್ಞಾನಿಕವಾಗಿ ಏರಿಸಲಾದುದರ ಕುರಿತು ಉಭಯ ರಾಜ್ಯಗಳ ಸಾರಿಗೆ ಅಧಿಕಾರಿಗಳಿಗೆ ಮನದಟ್ಟು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಬೇಡಿಕೆಯನ್ನು ಪರಿಗಣಿಸಿದ ಅಧಿಕಾರಿಗಳು ಏರಿಸಲಾದ ಟಿಕೆಟ್ ಬೆಲೆಯನ್ನು ಆಂಶಿಕವಾಗಿ ಇಳಿಸಿದ್ದಾರೆ. ವಾರದ ಹಿಂದೆ ಮಂಗಳೂರು ಹಾಗೂ ನಯಾಬಜಾರ್ ನಡುವಿನ ಟಿಕೆಟ್ ದರವನ್ನು 39 ರೂ. ನಿಂದ 42 ರೂ. ಗೆ ಏರಿಸಲಾಗಿತ್ತು. ಈಗ ಪುನ: ಬೆಲೆಯನ್ನು 40ರೂ. ಆಗಿ ಕಡಿತಗೊಳಿಸಲಾಗಿದೆ.
ಮಂಗಳೂರು - ಹೊಸಂಗಡಿ ನಡುವಿನ ಪ್ರಯಾಣಕ್ಕೆ ಮೊದಲು 36 ರೂ. ಇದ್ದ ದರ ವಾರದ ಹಿಂದೆ 38ರೂ.ಗೆ ಏರಿಸಲಾಗಿತ್ತು. ಈಗ ಪುನ: ಈ ಅಂತರದ ಟಿಕೆಟ್ ಬೆಲೆಯನ್ನು 37ರೂ. ಗೆ ಇಳಿಸಲಾಗಿದೆ. ಈ ವಿಚಾರವಾಗಿ ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕರ್ನಾಟಕ ಸಾರಿಗೆ ಇಲಾಖೆಯ ಅಧಿಕಾರಿ ಜೈಶಾಂತ್ ಕುಮಾರ್(ಡಿಟಿಒ) ಹಾಗೂ ಕೇರಳ ಸಾರಿಗೆ ಅಧಿಕಾರಿ ಮನೋಜ್(ಡಿಟಿಒ) ಅವರಿಗೆ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಯು ಕೃತಜ್ಞತೆ ತಿಳಿಸಿದೆ.
ಅವೈಜ್ಞಾನಿಕ ದರ ಏರಿಕೆಯ ಪೂರ್ಣ ವಿವರಗಳನ್ನು ವೈಜ್ಞಾನಿಕವಾಗಿ ಅಧಿಕಾರಿಗಳಿಗೆ ಮನದಟ್ಟು ಮಾಡಿ ದರ ಇಳಿಕೆಗೆ ಕಾರಣರಾದ ಗಣೇಶ್ ಭಟ್ ಅವರನ್ನು ಬಿಜೆಪಿ ಮಂಡಲ ಸಮಿತಿಯು ಅಭಿನಂದಿಸಿದೆ.