ನವದೆಹಲಿ: ಲೋಕಸಭೆಯ ಸಭಾಧ್ಯಕ್ಷರಾಗಿ ಓಂ ಬಿರ್ಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ಬೆಳಗ್ಗೆ ಲೋಕಸಭೆಯಲ್ಲಿ ಓಂ ಬಿರ್ಲಾ ಅವರನ್ನು ನೂತನ ಸ್ಪೀಕರ್ ಆಗಿ ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನಿಲುವಳಿ ಮಂಡಿಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿಲುವಳಿಯನ್ನು ಸದನದ ಮುಂದೆ ವರ್ಗಾಯಿಸಿದಾಗ ಅದಕ್ಕೆ ಕಾಂಗ್ರೆಸ್, ಜೆಡಿಯು, ಎಐಎಡಿಎಂಕೆ, ಬಿಜೆಡಿ, ಅಪ್ನಾದಳ್ ಸೇರಿದಂತೆ ವಿವಿಧ ಪಕ್ಷಗಳ ಸದಸ್ಯರು ಬೆಂಬಲ ಸೂಚಿಸಿದರು.
ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ಓಂ ಬಿರ್ಲಾ ಅವರು 17ನೇ ಲೋಕಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಬಳಿಕ ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇದು ಸದನಕ್ಕೆ ಅತ್ಯಂತ ಹೆಮ್ಮೆಯ ಕ್ಷಣ, ಓಂ ಬಿರ್ಲಾ ಅವರು ಅವಿರೋಧವಾಗಿ ಲೋಕಸಭೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಹಲವು ಸಂಸದರಿಗೆ ಬಿರ್ಲಾ ಅವರ ಪರಿಚಯವಿದೆ. ರಾಜಸ್ತಾನದಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.
ನನಗೆ ಅವರ ಜೊತೆ ದೀರ್ಘಕಾಲ ಕೆಲಸ ಮಾಡಿದ ನೆನಪು ಇದೆ. ಶಿಕ್ಷಣ ಮತ್ತು ಕಲಿಕೆಗೆ ಹೆಸರುವಾಸಿಯಾದ ಕೋಟ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದಾರೆ. ಹಲವು ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿದ್ದಾರೆ. ವಿದ್ಯಾರ್ಥಿ ನಾಯಕನಾಗಿ ಹೋರಾಟ ಆರಂಭಿಸಿದ ಬಿರ್ಲಾ ವಿಶ್ರಾಂತಿಯನ್ನು ಪಡೆಯದೆ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ ಎಂದು ಶ್ಲಾಘಿಸಿದರು.
ಓಂ ಬಿರ್ಲಾ ಪರಿಚಯ: 2019ರ ಲೋಕಸಭಾ ಚುನಾವಣೆಗೆ ಕೋಟಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸಿನ ರಾಮನಾರಾಯಣ ಅವರನ್ನು 2.5 ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಓಂ ಬಿರ್ಲಾ ಒಟ್ಟು ಮೂರು ಬಾರಿ ಶಾಸಕರಾಗಿದ್ದು, ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
57 ವರ್ಷದ ಬಿರ್ಲಾ ರಾಜಸ್ತಾನ ವಿಧಾನಸಭೆಯಲ್ಲಿ ಮೂರು ಬಾರಿ ಶಾಸಕರಾಗಿದ್ದರು. 17 ನೇ ಲೋಕಸಭೆಗೆ ಅವರು ಎರಡನೇ ಬಾರಿಗೆ ಕೋಟ ಕ್ಷೇತ್ರದಿಂದ ಆಯ್ಕೆ ಆಗಿದ್ದಾರೆ. ಬಿರ್ಲಾ ಅವರ ಪತ್ನಿ ಡಾ. ಅಮಿತಾ ಬಿರ್ಲಾ. ಇಬ್ಬರು ಹೆಣ್ಣು ಮಕ್ಕಳು. ಆಕಾಂಕ್ಷ ಚಾರ್ಟರ್ಡ್ ಅಕೌಂಟೆಂಟ್. ಅಂಜಲಿ ರಾಮಾಜಾಸ್ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದ ವಿದ್ಯಾರ್ಥಿನಿಯಾಗಿದ್ದಾರೆ.