ಬದಿಯಡ್ಕ: ಕಾಲ ಬದಲಾದಂತೆ ಓದುವ ಅವಕಾಶ ಗಣನೀಯವಾಗಿ ಹೆಚ್ಚಾಗಿದೆ. ಆದರೆ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ಈ ಕಾಲ ಘಟ್ಟದ ದುರಂತ. ಓದು ಎನ್ನುವುದು ಕೇವಲ ಅಂಕ ಗಳಿಕೆಗೆ ಅಥವಾ ಇತರ ನಮ್ಮ ಅಗತ್ಯಗಳಿಗೆ ಮಾತ್ರವಾಗಿರಬಾರದು. ಬದಲಾಗಿ ಅದೊಂದು ಹವ್ಯಾಸವಾಗಿ ಜೀವನದ ಭಾಗವಾಗಿರಬೇಕು ಎಂದು ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಬದಿಯಡ್ಕ ನವಜೀವನ ಪ್ರೌಢ ಶಾಲೆಯಲ್ಲಿ ಬುಧವಾರ ಜರುಗಿದ ವಾಚನಾವಾರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಓದುವಿಕೆ ನಮ್ಮ ಬುದ್ಧಿಯನ್ನು, ಚಿಂತನಾ ಶಕ್ತಿಯನ್ನು ವೃದ್ಧಿಸಿ ಅರಿವಿನ ಆಳವನ್ನು ವಿಸ್ತಾರಗೊಳಿಸುತ್ತದೆ. ಓದುವುದು ಮತ್ತು ಓದಿದ ವಿಷಯಗಳನ್ನು ಚರ್ಚಿಸಿ ಜೀವನದಲ್ಲಿ ಅಳವಡಿಸಿಕೊಂಡಾಗ ಸುಸಂಸ್ಕøತ ಬದುಕು ನಮ್ಮದಾಗುತ್ತದೆ. ನಮ್ಮ ನಿಜವಾದ ನಿಷ್ಠಾವಂತ ಗೆಳೆಯರು ಪುಸ್ತಕಗಳು. ಧೈರ್ಯ, ಮನೋಸ್ಥೈರ್ಯವನ್ನು ಹೆಚ್ಚಿಸಿ ಒಲಿತು ಕೆಡುಕುಗಳನ್ನು ವಿಭಜಿಸುವ ಮತ್ತು ಸರಿಯಾದುದನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುವ ಮನಃಸ್ಥಿತಿಗೆ ರೂಪುನೀಡುವಲ್ಲಿ ಓದು ಮಹತ್ವದ ಪಾತ್ರ ವಹಿಸುತ್ತದೆ. ಆದುದರಿಂದ ಪಿ.ಎನ್.ಪಣಿಕ್ಕರ್ ಅವರು ಸಮಾಜಕ್ಕೆ ಅರಿವಿನ ಬೆಳಕನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭ ಅವರು ವಾಚನಾ ವಾರಾಚರಣೆಯ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಬಿಆರ್‍ಸಿಯ ಮಮತಾ ಅಧ್ಯಕ್ಷತೆವಹಿಸಿ ಮಾತನಾಡಿ ಓದು ವ್ಯಕ್ತಿತ್ವವನ್ನು ರೂಪಿಸುವ ಮಾರ್ಗವಾಗಿದ್ದು ಜ್ಞಾನದ ಮೂಲವಾಗಿದೆ ಎಂದು ಹೇಳಿದರು. ಶಾಲಾ ಶಿಕ್ಷಕಿ ಶುಭ ಉಪಸ್ಥಿತರಿದ್ದು ಹಾರೈಸಿದರು. ಪ್ರಭಾವತಿ ಕೆದಿಲಾಯ ಸ್ವಾಗತಿಸಿ ದಿವ್ಯಾ ವಂದಿಸಿದರು.