ಕಾಸರಗೋಡು: ಬೇಕಲ ಸರಕಾರಿ ಫಿಶರೀಸ್ ಹೈಯರ್ ಸೆಕೆಂಡರಿ ಶಾಲೆಯ 1992-93ನೇ ವರ್ಷದ ಎಸ್‍ಎಸ್‍ಎಲ್‍ಸಿ ಬ್ಯಾಚ್ ಆದ ಸತೀಥ್ರ್ಯರ್ ಎಂಬ ಸಂಘಟನೆ ಬೆಳ್ಳಿಹಬ್ಬ ಆಚರಣೆಯ ಅಂಗವಾಗಿ ಶಾಲೆಯಲ್ಲಿ ನಿರ್ಮಿಸಿ ನೀಡಿದ ಪ್ರವೇಶ ದ್ವಾರವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ಉದ್ಘಾಟಿಸಿದರು.
ಪ್ರವೇಶ ರಸ್ತೆಯಲ್ಲಿ ಇಂಟರ್‍ಲಾಕ್ ಅಳವಡಿಸಿ ಸುಮಾರು 3 ಲಕ್ಷದಷ್ಟು ರೂ. ವೆಚ್ಚದಲ್ಲಿ ಪ್ರವೇಶ ದ್ವಾರ ನಿರ್ಮಿಸಲಾಗಿದೆ. ಶಾಲೆಯಿಂದ ಈ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎಪ್ಲಸ್ ಗ್ರೇಡ್ ಪಡೆದ ಅನೌಶಿಕ, ಅಜಿಶ, ನಂದನ, ಲಿಯ ಮೋಹನ್, ಪ್ರಿಯೇಶ್ ಹಾಗು ಯುಎಸ್‍ಎಸ್ ಸ್ಕಾಲರ್‍ಶಿಪ್ ಪಡೆದ ಕಾರ್ತಿಕ ಅವರನ್ನು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ಮರಣಿಕೆ ನೀಡಿ ಅಭಿನಂದಿಸಿದರು.
ಹಳೆಯ ಎಸ್‍ಎಸ್‍ಎಲ್‍ಸಿ ಬ್ಯಾಚ್‍ಗಳಲ್ಲಿ ಬೆಳ್ಳಿಹಬ್ಬ ಆಚರಿಸಿ ಶಾಲೆಯ ಭೌತಿಕ ಸೌಕರ್ಯಗಳ ಅಭಿವೃದ್ಧಿಗೆ ಮುನ್ನುಗ್ಗಿದ ಮೊದಲ ಸಂಘಟನೆಯಾಗಿದೆ ಸತೀಥ್ರ್ಯರ್. ಇಂತಹ ಕಾರ್ಯಾಚರಣೆಯನ್ನು ನಡೆಸಿ ಇತರ ಎಸ್‍ಎಸ್‍ಎಲ್‍ಸಿ ಬ್ಯಾಚ್‍ಗಳಿಗೆ ಸತೀಥ್ರ್ಯರ್ ಮಾದರಿಯಾಗಿದೆ ಎಂದು ಜಿಲ್ಲಾ„ಕಾರಿ ಹೇಳಿದರು. ಸತೀಥ್ರ್ಯರ್‍ನ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಪರಿಸರದಲ್ಲಿ ಜಿಲ್ಲಾ„ಕಾರಿ ಮಾವಿನ ಸಸಿ, ಉದುಮ ಪಂಚಾಯತ್ ಅಧ್ಯಕ್ಷರು ಚಾಯಾ ಮನ್ಸ ಎಂಬ ಔಷಧೀಯ ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.
ಉದುಮ ಪಂಚಾಯತ್ ಅಧ್ಯಕ್ಷ ಕೆ.ಎ.ಮುಹಮ್ಮದಲಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಜಿಲ್ಲಾ ಶಿಶು ಕಲ್ಯಾಣ ಸಮಿತಿ ಕಾರ್ಯದರ್ಶಿ ಮಧು ಮುದಿಯಕ್ಕಾಲ್, ವಿ.ಆರ್.ವಿದ್ಯಾಸಾಗರ್, ಶಾಲಾ ಮುಖ್ಯೋಪಾಧ್ಯಾಯ ಕೆ.ಜಯಪ್ರಕಾಶ್, ವಾರ್ಡು ಸದಸ್ಯೆ ಶ್ಯಾಮಲ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರನ್, ಕೆ.ವಿ.ಶಂಭು ಬೇಕಲ, ಎ.ಕುಞÂರಾಮನ್, ಪ್ರಜಿತ್ ಮಾಲಾಕುನ್ನು, ವಿಶ್ವಂಭರನ್ ಕಡಂಬಜಾಲ್, ಸುರೇಶನ್ ಕರಿಪೆÇ್ಪಡಿ, ಖಲೀಲ್ ಪೆರಿಯಾಟಡ್ಕ, ಫೌಸಿಯ ಫಾರೂಖ್ ಮಾತನಾಡಿದರು. ಸತೀಥ್ರ್ಯರ್ ಅಧ್ಯಕ್ಷ ದಿನೇಶನ್ ಪಳ್ಳಿಕ್ಕೆರೆ ಸ್ವಾಗತಿಸಿ, ಅಧ್ಯಕ್ಷ ರಾಜೇಂದ್ರನ್ ಮುದಿಯಕ್ಕಾಲ್ ವಂದಿಸಿದರು.